ಕಥೆ (ಭಾಗ- 38)
ಚೇತನ್ ವರ್ಕಾಡಿ

ಮೊದಲ ಬಾರಿಗೆ ಸುಗಂಧಿಯ ಮಾತುಗಳನ್ನು ಪೋನ್‌ನಿಂದ ಆಲಿಸುತ್ತಿದ್ದಾಳೆ ಮಂಗಳ.ತನ್ನ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ ನಂತರ ನೇರವಾಗಿ ನಮ್ಮ ಮನೆಗೆ ಯಾವಾಗ ಬರ್ತಿಯ ಮಗಳೆ ನೀನಿಲ್ಲದೆ ಅದೇನೊ ಕಳೆದು ಹೋದಂತಿದೆ ಎಂದು ತನ್ನ ಮನದಲ್ಲಿದ್ದ ಬೇಸರವನ್ನು ಮಾತಿನ ಮೂಲಕ ವ್ಯಕ್ತಪಡಿಸಿದರು.ಇತ್ತ ಮಂಗಳಳಿಗೂ ಮಧುವಿನ ಸೇವೆ ಮಾಡುತ್ತಾ ಇದ್ದವಳು !ತನ್ನ ಮನೆಗೆ ಬಂದೊಡನೆ ಏನೊ ಕಳೆದುಕೊಂಡಂತಹ ಭಾವನೆ ಮನದಮೂಲೆಯಲ್ಲಿ ಗೋಚರಿಸುತ್ತಿತ್ತು.ಏನಾಗಿರಬಹು ಅನ್ನೋದರಲ್ಲೆ ಸಮಯ ಕಳೆಯುತ್ತಿದ್ದಳು.ತಂದೆ ಹಾಕಿದ ಗೆರೆಯನ್ನು ದಾಟುವಂತಿರಲಿಲ್ಲ ಅವಳಿಗೆ.ದಿನಗಳುರುಳಿತು,ಮಧುವಿಗೂ ಮಂಗಳಲ ಪ್ರೀತಿಯಕೋಟೆಯ ಒಳಗಿನಿಂದ ಹೊರಬರಲಾಗಲಿಲ್ಲ.ಒಂದುಕಡೆ ತನ್ನ ಆರೋಗ್ಯ ಸೇವೆಗಾಗಿ ತನ್ನ ಭಾವಿ ಸಂಗಾತಿಯನ್ನೆ ಕಳುಹಿಸಿ ಕೊಟ್ಟ ಆಪ್ತಮಿತ್ರ ಒಂದು ಕಡೆಯಾದರೆ,ತನ್ನ ಸೇವೆಯ ಮೂಲಕ ಪುನರ್ಜನ್ಮ ನೀಡಿದ ತನ್ನ ಹೃದಯದೇಗುಲದಲ್ಲಿ ನೆಲೆಯಾಗಿರುವ ಮಂಗಳ ಮತ್ತೊಂದು ಕಡೆ.ತನ್ನನ್ನು ಬದುಕಿಸಲು ತನ್ನ ಗೆಳೆಯ ಪಟ್ಟ ಶ್ರಮಕ್ಕಾಗಿ ಮಧು ಒಂದು ದೃಢನಿರ್ಧಾರಕ್ಕೆ ಬಂದೇಬಿಟ್ಟ..
ತಾನೆ ಮುಂದೆ ನಿಂತು ಮಿಥುನ್ ಮತ್ತು ಮಂಗಳಲ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದು ಆಲೋಚಿಸಿದ,ಅದಕ್ಕಾಗಿ ಮಿಥುನ್‌ಗೆ ಸರ್ಪ್‌ರೈಸ್ ಕೊಡೋದಕ್ಕಾಗಿಯೆ ಎಲ್ಲಾ ಸಿದ್ಧತೆ ಮಾಡುತ್ತಿದ್ದಂತೆಯೇ…. ಇತ್ತ ಸೌಂದರ್ಯಳ ಹೊಸ ಆಟವೊಂದು ಆರಂಭವಾಗತೊಡಗಿತು….


ಮಧು ಮತ್ತು ಮಂಗಳಳನ್ನು ಒಟ್ಟಾಗಿ ನೋಡಿ ಹುಚ್ಚಿಯಂತಾಗಿದ್ದ ಸೌಂಧರ್ಯ, ಮಂಗಳಳನ್ನು ಮಧುವಿನಿಂದ ಶಾಶ್ವತವಾಗಿ ದೂರವಿರಿಸಲು ಮಂಗಳಲ ಪೂರ್ತಿ ಬಯೋಡಾಟವನ್ನು ತಯಾರಿಸಿಬಿಟ್ಟಿದ್ದಳು ಮಿಥುನ್ ಎಂಬ ಹೊಸಮುಖ ಅವಳ ಆಟಕ್ಕೆ ಬುಗುರಿಯಾಗಿ ಸಿಕ್ಕೇಬಿಟ್ಟಿತು.ಕಥೆ ಉಪಕಥೆಗಳನ್ನು ತಾನೇ ಸೃಷ್ಟಿಸಿ ಮಿಥುನ್ ಅನ್ನುವ ಒಳ್ಳೆಯ ವ್ಯಕ್ತಿಯೂ ನಂಬುವಂತೆ ತಾನೆ ಬರೆದ ಸುಳ್ಳಿನ ಅಧ್ಯಾಯವನ್ನು ಕಣ್ಣಾರೆ ಕಂಡಂತೆಯೆ ಮಿಥುನ್‌ನ ಬಳಿ ಪೋನ್ ಮುಖಾಂತರ ವಿವರಿಸತೊಡಗಿದಳು…
(ಮುಂದುವರಿಯುವುದು)







