ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್ಸ್ ಕ್ಯಾಲ್ಸಿಯಂ ಮಾತ್ರೆಗಳು ಸೇರಿ 71 ಔಷಧಗಳು ಕಳಪೆ

ನವದೆಹಲಿ: ದೇಶದಲ್ಲಿ ಸೆಪ್ಟಂಬರ್ ತಿಂಗಳಲ್ಲಿ ವಿವಿಧ ಕಂಪನಿಗಳ ಔಷಧಿಗಳ ಮಾದರಿ ಪರೀಕ್ಷೆ ನಡೆಸಲಾಗಿದ್ದು ಅವುಗಳಲ್ಲಿ ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳು ಸೋಡಿಯಂ ಮಾತ್ರೆಗಳು, ಇಂಜೆಕ್ಷನ್ ಸೇರಿ 71 ಔಷಧಿಗಳು ಕಳಪೆ ಗುಣಮಟ್ಟದ್ದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಫರೀದಾಬಾದ್ ನ ಹಿಂದುಸ್ತಾನ್ ಆಂಟಿಬಯೋಟಿಕ್ಸ್ ಉತ್ಪಾದಿಸಿದ ಮೆಟ್ರೋನಿಡಾಜೋಲ್ ಐಪಿ 400 ಎಂಜಿ ಮಾತ್ರೆ, ರೈನ್ ಬೋ ಲೈಫ್ ಸೈನ್ಸ್ ನ ಡೋನ್ ಪೆರಿಡನ್ ಸಸ್ಪೆಷನ್ : ಪುಷ್ಕರ್ ಫಾರ್ಮಾದ ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ 5 ಐ ಯು/ ಎಂಎಲ್: ಮಾರ್ಟಿನ್ & ಬ್ರೌನ್ ಕಂಪನಿಯ ಕ್ಯಾಲ್ಸಿಯಂ ಗ್ಲುಕೋನೆಟ್ ಇಂಜೆಕ್ಷನ್ ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್ ನ ಕ್ಯಾಲ್ಸಿಯಂ 500mg ಮತ್ತು ವಿಟಮಿನ್ ಡಿ3 250 ಮಾತ್ರೆ ಸೇರಿವೆ.









