ಲೇಖನ
ನಿತ್ಯಾನಂದ ಕಾಮತ್, ಮೂಡುಬಿದರೆ

ದೀಪಾವಳಿ ಎಂದರೆ ಪ್ರಭು ಶ್ರೀರಾಮನು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಕ್ಷಣ ! ಅಯೋಧ್ಯಾವಾಸಿಗಳು ಶ್ರೀ ರಾಮನ ಆಗಮನವನ್ನು ದೀಪಗಳ ಬೆಳಕಿನಿಂದ ಮಾಡಿದರು.ಆದರೆ ನಾವಿಂವು ಪಟಾಕಿಯ ಕರ್ಕಶತೆಯಿಂದ ಆಚರಿಸುತ್ತಿದ್ದೇವೆ. ಪಟಾಕಿಯ ಬಗ್ಗೆ ಧರ್ಮಶಾಸ್ತ್ರಗಳಲ್ಲಿ ಉಲ್ಲೇಖವಿಲ್ಲ.ಹಾಗಾದರೆ ನಾವೇಕೆ ಪಟಾಕಿ ಬಳಸುತ್ತಿದ್ದೇವೆ?.ದೀಪಾವಳಿಯ ನಿಜವಾದ ಅರ್ಥವು ತಿಳಿದಿದೆಯೇ?….
ಅಜ್ಞಾನದ ಅಂಧಕಾರದಿಂದ ಜ್ಞಾನರೂಪೀ ಪ್ರಕಾಶದ ಕಡೆಗೆ ಕಡೆದುಕೊಂಡು ಹೋಗುವ ಆನಂದದ ದೀಪಾವಳಿಯನ್ನು ಬೆಳಕಿನಿಂದ ಆಚರಿಸೋಣ. ಪಟಾಕಿಯಿಂದ ದೇಶದಲ್ಲಿ ಅನೇಕ ದುರ್ಘಟನೆಗಳು ಆಗುತ್ತಿರುವುದರಿಂದ ಅನೇಕ ಜನರು ಕಣ್ಣು ಕಳೆದುಕೊಂಡು ಕುರುಡರಾಗಿ ಮತ್ತು ಪಟಾಕಿಯ ಶಬ್ಧದಿಂದಾಗಿ ಕಿವುಡರಾಗುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಪಟಾಕಿ ಕಾರ್ಖಾನೆಗಳಲ್ಲಿ ನಡೆದ ದುರ್ಘಟನೆಗಳಿಂದ ಅಪಾರ ಹಾನಿ ಸಾವು-ನೋವುಗಳಾದ ಘಟನೆಗಳನ್ನು ನಾವು ಕೇಳಿದ್ದೇವೆ. ಪಟಾಕಿಯನ್ನು ದೇಶದಲ್ಲಿ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸಬೇಕಾಗಿದೆ. ಪಟಾಕಿಯ ಹೊಗೆಯಿಂದಾಗಿ ಶ್ವಾಸಕೋಶಕ್ಕೆ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಗಳು ಬರುವುದು ಅನೇಕ ವೈಜ್ಞಾನಿಕ ಸಂಶೋಧನೆಯಿಂದ ದೃಡಪಟ್ಟಿರುತ್ತದೆ.ಹಾಗೆಯೇ ಪಟಾಕಿಗಳಲ್ಲಿ ದೇವತೆಗಳ ವಿಡಂಬಣೆ ಆಗುತ್ತಿರುವುದು ಗಮನಕ್ಕೆ ಬರುತ್ತಿದೆ.ನಾವು ದೀಪಾವಳಿಯನ್ನು ಆನಂದದಿಂದ ಮತ್ತು ಶಾಂತಿಯಿಂದ ಆಚರಿಸೋಣ. ಅಂಧಕಾರಕ್ಕೆ ತಳ್ಳುವ ಈ ರಾಕ್ಷಸನಂತಹ ಪಟಾಕಿ ನಮಗೇಕೆ? ನಾಗರಿಕರೇ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇಂದೇ ಜಾಗೃತರಾಗುವ.





















































