
ಮಂಗಳೂರು: ಅಕ್ಟೋಬರ್ 24ರಂದು ಡಾನಾ ಚಂಡಮಾರುತ ಸಂಭವಿಸುವ ಹಿನ್ನೆಲೆಯಲ್ಲಿ ರೈಲ್ವೆ ಸೇವೆಯಲ್ಲಿ ವ್ಯತ್ಯಯವಾಗಿದ್ದು ನಂ. 22851 ಸಂತ್ರಗಚ್ಚಿ ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಸಂಪೂರ್ಣ ರದ್ದಾಗಲಿದ್ದು ಅಕ್ಟೋಬರ್ 24ರಂದು ಹೊರಡಬೇಕಿದ್ದ ರೈಲು ನಂ.22644 ಪಾಟ್ನಾ ಜಂಕ್ಷನ್ ಎರ್ನಾಕುಲಂ ಜಂಕ್ಷನ್ ಸೂಪರ್ ಪಾಸ್ಟ್ ರೈಲನ್ನು ರದ್ದು ಮಾಡಲಾಗಿದೆ.
ಅಕ್ಟೋಬರ್ 26ರಂದು ಮಂಗಳೂರು ಸೆಂಟ್ರಲ್ ನಿಂದ ಹೊರಡಬೇಕಿದ್ದ ರೈಲು ನಂ. 22852 ಮಂಗಳೂರು ಸೆಂಟ್ರಲ್ ಸಂತ್ರಗಚ್ಚಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ.






















































