ಕಥೆ (ಭಾಗ- 33)
ಚೇತನ್ ವರ್ಕಾಡಿ

ಡಾ!ಪ್ರತಾಪ್ ಹೇಳಿದಂತೆಯೆ ಮಧುವನ್ನು ಒಬ್ಬಳು ತಾಯಿ ಮಗುವನ್ನು ನೋಡುವಂತೆಯೇ ರಾತ್ರಿ ಹಗಲೆನ್ನದೆ ಹಾರೈಕೆ ಮಾಡಿದಳು ಮಂಗಳ.ಇತ್ತ ಮಿಥುನ್ ತನ್ನ ಕೆಲಸದ ನಿಮಿತ್ತ ಬೆಂಗಳೂರಿನಿಂದ ಡೆಲ್ಲಿಗೆ ವರ್ಗಾವಣೆಯಾಗಿದ್ದ.ತನ್ನ ಮಗನನ್ನು ಮಂಗಳ ರಾತ್ರಿ ಹಗಲೆನ್ನದೆ ಹಾರೈಕೆ ಮಾಡುತ್ತಿರುವ ಅವಳ ಆ ಮಾತೃ ಹೃದಯವನ್ನು ನೋಡಿ ತನ್ನಷ್ಟಕ್ಕೆ ಖುಷಿ ಪಡುತ್ತಿದ್ದಳು ಸುಗಂಧಿ.ಮಂಗಳಳ ಕೈಗುಣವೋ ,ಮಧುವಿನ ಹೃದಯದಲ್ಲಿ ಅಡಗಿದ್ದ ಅವನ ಪ್ರೀತಿಯ ಫಲವೋ ದಿನಕಳೆದಂತೆ ಆತನ ಆರೋಗ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿತು.ಸ್ಮಶಾನ ಮೌನವಾಗಿದ್ದ ಮನೆಯಲ್ಲಿ ನಗುವಿನ ಹೊಸಜಾತ್ರೆಗೆ ಮುನ್ಸೂಚನೆಯ ಸಂದೇಶವೊಂದು ದೂರದಿಂದ ಕೇಳಿಬರುತ್ತಿತ್ತು.ಮರೆತು ಹೋದ ನೆನಪುಗಳು ಒಂದೊಂದಾಗಿ ಮರುಕಳಿಸತೊಡಗಿತು.ಬಿದ್ದು ಹೋದ ಕೈಕಾಲುಗಳು ಮತ್ತೆ ತನ್ನ ವೃತ್ತಿಯನ್ನು ಆರಂಭಿಸಿತು.ಮನೆ ಮನಗಳು ಅರಳಿದವು.ಕೊನೆಗೂ ಮಂಗಳ ಗೆದ್ದು ಬಿಟ್ಟಳು.ಸರಿ ಸುಮಾರು ಎರಡು ತಿಂಗಳೊಳಗೆ ಮಧುವಿನ ರೋಗ ಅರ್ಧದಷ್ಟು ಗುಣಮುಖವಾಗುತ್ತಾ ಬಂತು.ಇತ್ತ ಮಂಗಳ ತನ್ನ ಮನೆಗೆ ಹೇಗೆ ಬಂದಳು ಅನ್ನೊ ವಿಷಯವನ್ನು ತಾಯಿ ಬಳಿ ಕೇಳಿದಾಗ ನಿಜಾಂಶ ತಿಳಿಯಿತು..
ಪ್ರತಾಪ್ ಮತ್ತು ಮಿಥುನ್‌ನಿಗೆ ಈ ವಿಷಯ ತಿಳಿದಾಗ ಖುಷಿಯಾಯಿತು.ಅಂತು ಇಂತು ದಿನಗಳು ಕಳೆಯುತ್ತಿದ್ದಂತೆಯೆ ಪೂರ್ತಿಯಾಗಿ ಗುಣಮುಖವಾಗುತ್ತಾ ಬರುತ್ತಿದ್ದ ಮಧು….
ಅತ್ತ ಸೌಂಧರ್ಯಳಿಗೂ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ ಮುಗಿದು ಮದುವೆ ಸಿದ್ಧತೆ ನಡೆಯುತ್ತಿದ್ದವು.ಅದೊಂದು ದಿನ ಬೆಳಿಗ್ಗೆ ಮಂಗಳಳ ತಂದೆಗೆ ಉಸಾರಿಲ್ಲ ಅನ್ನೊ ಪೋನ್‌ಕರೆ ಬಂದಾಗ!ತಂದೆಯನ್ನು ನೋಡಲೇ ಬೇಕೆಂದು ಹೊರಟುನಿಂತಳು ಮಂಗಳ.ಹಳ್ಳಿ ಹುಡುಗಿಗೆ ಒಬ್ಬಳಿಗೆ ಆ ದೂರದ ಊರಿಗೆ ಹೋಗಲು ಸಾಧ್ಯವಾಗದ ಕಾರಣ, ತನಗೆ ಮರುಜನ್ಮ ನೀಡಿದ ಮಂಗಳಳನ್ನು ತಾನೆ ಕಾರಿನಲ್ಲಿ ಕುಳ್ಳಿರಿಸಿ ಹಳ್ಳಿಯತ್ತ ಹೊರಟೇಬಿಟ್ಟ ಮಧು…
ಮಾತುಗಳು ಮೌನವಾಗಿತ್ತು .ಸುಮಾರು ನಾಲ್ಕು ತಿಂಗಳುಗಳ ಅಜ್ಞಾತ ವಾಸವನ್ನು ಮುಗಿಸಿ ಮೊದಲ ಬಾರಿಗೆ ಹೊರಗಡೆ ಹೊರಟಿದ್ದ ಮಧುವಿನ ಮುಖದೊಳಗೆ ಅದೇನೊ ಖುಷಿ ,ಎಲ್ಲವನ್ನೂ ಅದ್ಭುತವೆನ್ನುವಂತೆ ವೀಕ್ಷಿಸುತ್ತಿದ್ದ.ಕಾರು ಮುಂದೆ ಸಾಗುತ್ತಿದ್ದಂತೆಯೆ ನೇರ ವಿರುದ್ಧ ದಿಕ್ಕಿನಿಂದ ಸೌಂಧರ್ಯ ಮತ್ತು ಅವಳ ಮನೆಯವರನ್ನು ಹೊತ್ತುಕೊಂಡು ಬರುತ್ತಿದ್ದ ಕಾರು ಮದುವೆಗೆ ಬಟ್ಟೆ ಬರೆ ಖರೀದಿಸಲು ಪೇಟೆಯತ್ತ ಹೊರಟಿತ್ತು.ಹತ್ತಿರ ಬರುತ್ತಿದ್ದಂತೆ ಕಾರಿನ ಗ್ಲಾಸ್ ಕೆಳಗಿಳಿಸುತ್ತಿದ್ದ ಸೌಂಧರ್ಯಳ ನೇರದೃಪ್ಟಿ ಮಧುವಿನ ಕಾರಿನ ಮೇಲೆ ಬಿತ್ತು. ಕನಸೋ ನನಸೋ ಎಂದು ತಿಳಿಯದ ಸೌಂಧರ್ಯ….
(ಮುಂದುವರಿಯುವುದು)













