
ಕಾರ್ಕಳದ ಅಕ್ವಾ ಪ್ಯಾಲೇಸ್ನ ಮಾಲಕರಾಗಿದ್ದ, ವಿಘ್ನೇಶ್ ಪ್ರಭು ಇಂದು ಸಂಜೆ ನಿಧನರಾಗಿದ್ದಾರೆ. ಹಿಂದೂ ಮುಖಂಡ ಪ್ರವೀಣ್ ವಾಲ್ಕೆ ಅವರ ಅಳಿಯರಾದ ಇವರು ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದು ಕೋಡ್ಸ್ ಕ್ರಿಯೇಶನ್ ಸ್ಟುಡಿಯೋ ಹೊಂದಿದ್ದರು.
ಕೆಲವು ದಿನಗಳಿಂದ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದ ವಿಘ್ನೇಶ್, ಬ್ರೈನ್ ಟ್ಯೂಮರ್ನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಇಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಮಗಳು, ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ.
ಇವರ ಅಂತಿಮ ವಿಧಿ ವಿಧಾನಗಳು, ಮಂಜುನಾಥ್ ಪೈ ಹಾಲ್ ಪಕ್ಕದಲ್ಲಿರುವ ಅವನೀಸ್ ಪ್ರೈಡ್ ನ ಮನೆಯಲ್ಲಿ 8 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.













