ತಾಯಿಯ ಮಹಿಮೆ ಎಂದು ಸಂಭ್ರಮಿಸಿದ ನವರಾತ್ರಿಯ ಸಂಭ್ರಮದಲ್ಲಿದ್ದ ಭಕ್ತ ಜನತೆ

ಕಾರ್ಕಳ: ನಗರದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಮಳೆ ಆರಂಭಗೊಂಡಿದ್ದು ವಿಜಯದಶಮಿಯ ಸಂಭ್ರಮದಲ್ಲಿದ್ದ ಜನರಿಗೆ ತಂಪನ್ನೆರೆದಿದೆ.

ದುರ್ಗಾ ಗ್ರಾಮದಲ್ಲಿ ಸುರಿದ ಕುಂಭ ದ್ರೋಣ ಮಳೆಯಿಂದಾಗಿ ತೆಳ್ಳಾರು ಜಲದುರ್ಗ ದೇವಸ್ಥಾನಕ್ಕೆ ನೀರು ಹರಿದು ಬಂದಿದ್ದು ನವರಾತ್ರಿ ಸಂಭ್ರಮದಲ್ಲಿದ್ದ ಭಕ್ತರು ಜಲ ದುರ್ಗೆಯ ಮಹಿಮೆ ಎಂದು ಸಂಭ್ರಮಿಸಿದ್ದಾರೆ.













