12.5 ಲಕ್ಷ ರೂ. ಗೆದ್ದ ,ಕಾರ್ಕಳ ಮೂಲದ ಡಾ. ಶ್ರೀಶ್ ಸತೀಶ್ ಶೆಟ್ಟಿ

ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ನಟ ಅಮಿತಾಬ್ ಬಚ್ಚನ್ ಖ್ಯಾತಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕರಾವಳಿ ಮೂಲದ ಕಾರ್ಕಳ ತಾಲೂಕಿನ ನಿಂಜೂರು ಮೂಡು ಮನೆಯ ಡಾ. ಶ್ರೀಶ್ ಸತೀಶ್ ಶೆಟ್ಟಿ 12.5 ಲಕ್ಷ ರೂ. ಗೆದ್ದುಕೊಂಡಿದ್ದಾರೆ.
ಡಾ. ಶ್ರೀಶ್ ಶೆಟ್ಟಿ ಪ್ರಸ್ತುತ ಗುಜರಾತ್ ಅಹ್ಮದಾಬಾದ್ ನಲ್ಲಿ ನೆಲೆಸಿದ್ದು, ಕಾರ್ಯಕ್ರಮದಲ್ಲಿ 12 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಸ್ಪರ್ಧೆಯಲ್ಲಿ 12.5 ಲಕ್ಷ ರೂ. ಗೆದ್ದುಕೊಂಡಿದ್ದಾರೆ. ಇವರು ಪಳ್ಳಿ ನಿಂಜೂರು ಮೂಡು ಮನೆಯ ಶ್ರೀವಲ್ಲಿ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಅವರ ಪುತ್ರ.













