
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಾಂತರಾ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ರಾಷ್ಟ್ರ ಪ್ರಶಸ್ತಿಯನ್ನು ಸ್ವೀಕರಿಸಿ ಮಂಗಳೂರಿಗೆ ಹಿಂತಿರುಗುವ, ಸಂದರ್ಭ ನಟನಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಿಷಬ್, ದೈವದ ಆಶೀರ್ವಾದ ಇಲ್ಲದೆ ಇದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ರಾಷ್ಟ್ರಪ್ರಶಸ್ತಿಯನ್ನು ಇಡೀ ನಮ್ಮ ಚಿತ್ರತಂಡಕ್ಕೆ ಮತ್ತು ದೈವದ ಪಾದಕ್ಕೆ ಮತ್ತು ದೈವ ನರ್ತಕ ಸಮುದಾಯಕ್ಕೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಚಿತ್ರ ಮಾಡುವಾಗ, ಚಿತ್ರ ಈ ರೀತಿಯ ಯಶಸ್ಸು ತಂದು ಕೊಡುತ್ತೆ ಅಂದುಕೊಂಡಿರಲಿಲ್ಲ. ಅಭಿಮಾನಿಗಳ ಪ್ರೀತಿಯೇ ಈ ಮಟ್ಟದ ಯಶಸ್ವಿಗೆ ಕಾರಣ, ಚಿತ್ರ ಮಂಗಳೂರಿನಲ್ಲಿ ಆರಂಭಗೊಂಡಿದ್ದು ಇದೀಗ ಪ್ರಶಸ್ತಿ ತೆಗೆದುಕೊಂಡು ಇಲ್ಲಿಗೆ ಬರುವಂತಾಗಿದೆ. ಪ್ರಶಸ್ತಿಯನ್ನು ದೈವದ ಪಾದಕ್ಕೆ ಇಟ್ಟು ನನ್ನ ಕೆಲಸ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.













