ಕಥೆ (ಭಾಗ- 21)
ಚೇತನ್ ವರ್ಕಾಡಿ

ಕುಳಿತ ಜಾಗದಿಂದ ಪಕ್ಕನೆ ಎದ್ದ ಮಧು,ಸುಂದರರಾಯರನ್ನು ಸಮಧಾನಿಸಲು ಮುಂದಾದ.ಆದರೂ ಸೌಂಧರ್ಯಳನ್ನು ಮದುವೆಯಾಗುವ ದೃಢನಿರ್ಧಾರಕ್ಕೆ ಬಾರದ ಮಧುವನ್ನು ಕಂಡು!ಮಧು ನೀನೆಷ್ಟು ಸಮಧಾನಿಸಿದರು ನನಗೆ ನಂಬಿಕೆ ಬರುತ್ತಿಲ್ಲ ಸೌಂಧರ್ಯಳನ್ನೆ ಮದುವೆ ಆಗುವುದಾಗಿ ನನಗೊಂದು ಮಾತು ಕೊಡುತ್ತಿಯ ಎಂದು ಅವನ ಕೈ ಹಿಡಿದಾಗ!ಮಧು ಹಿಡಿದಿದ್ದ ಕೈಯನ್ನು ಬಿಡಿಸಿ ದೂರ ಸರಿದ.ಮಿಥುನ್ ಎಲ್ಲವನ್ನು ನೋಡುತ್ತಿದ್ದ ಗೆಳೆಯನ ಮನಸಿನ ನೋವನ್ನು ಅರ್ಥಮಾಡಿಕೊಂಡವನೆ ಸುಂದರರಾಯರಿಗೆ ಧೈರ್ಯದ ಮಾತು ತುಂಬಿ ತಾನು ಗೆಳೆಯನನ್ನು ಒಪ್ಪಿಸುವುದಾಗಿ ಮಾತು ಕೊಟ್ಟ. ಸುಂದರರಾಯರಿಗೆ ಈಗ ಸ್ವಲ್ಪ ಸಮಧಾನವೆನಿಸಿತು,ಅಲ್ಲಿಂದ ಹೊರಟೇಬಿಟ್ಟರು.ಸೋಮಶೇಖರರಾಯರಿಗೂ ತಾಯಿ ಸುಗಂಧಿಗು ಮಗನ ವರ್ತನೆ ನೋಡಿ ಕೋಪ ಬಂದರು ಆತನ ಮನದಲ್ಲಿ ಅಡಗಿದ್ದ ಅದೇನೊ ನೋವು ಮುಖದಲ್ಲಿ ಕಾಣುವುದನ್ನು ಕಂಡವರು ಏನಾಯ್ತು ಮಧು ಯಾಕೆ ಈ ರೀತಿ ಹಟ ಮಾಡ್ತ ಇದ್ದಿಯ ನಿನ್ ಮನಸಲ್ಲಿ ಏನಿದೆ ಅದನ್ನಾದ್ರು ಬಿಚ್ಚಿಡೊ ಎಂದು ಹೇಳಿದಾಗ!ಮಧು ಮಿಥುನ್‌ನ ಮುಖ ನೋಡಿದ.ಜೀವದ ಗೆಳೆಯನ ಮುಖದಲ್ಲೂ ನಗುವಿನ ಛಾಯೆ ಮುದುಡಿಹೋಗಿತ್ತು….
ಅದು ರಾತ್ರಿಯ ಹೊತ್ತು ಮಧುವಿನ ರೂಂನಲ್ಲೇ ಮಿಥುನ್ ಕೂಡ ಮಲಗಿದ್ದ. ಅಷ್ಟೊಂದು ಹರಟೆ ಹೊಡೆಯುತ್ತಿದ್ದ ಮಧು ಈಗ ಮೌನಿ,ಅದೇನೊ ಯೋಚನೆ,ತಪ್ಪು ಮಡಿಬಿಟ್ಟೆಯೋ ಅನ್ನೊ ನೋವು,ಇದೆಲ್ಲ ಆತನ ಮುಖದಲ್ಲಿ ಬಂದು ಹೋಗುತ್ತಿತ್ತು. ಮಿಥುನ್ ಎಷ್ಟು ಕೇಳಿದರೂ ಮನದ ಸತ್ಯವನ್ನು ಬಿಚ್ಚದೆ ಹಾಗೆಯೆ ಮಲಗಿಬಿಟ್ಟ ಮಧು.ಯೋಚನೆಗಳ ಸರಮಾಲೆ ಸುತ್ತ ಆವರಿಸಿದ ಮಧುವಿಗೆ ಆ ರಾತ್ರಿ ತುಂಬಾ ಉದ್ದವಾಗಿ ಗೋಚರಿಸಿತು..
ಬೆಳಿಗ್ಗೆ ಎದ್ದವರೆ ಇಬ್ಬರೂ ಫ್ರೆಶ್ ಆಗಿ ಚಾ ತಿಂಡಿ ಮುಗಿಸಿ ಮಿಥುನ್ ಕೂಡ ಮಧುವಿನ ಕಾರಿನಲ್ಲೆ ಬಸ್ ಸ್ಟಾಪ್ ತನಕ ಜೊತೆಯಾಗಿ ಹೋದ.ಬಸ್ ಸ್ಟಾಪ್ ಸಮೀಪಿಸಿತು ಇನ್ನೇನು ಇಳಿಯಬೇಕೆಂದಾಗ ಮಿಥುನ್ ಮಾತುಮುಂದುವರಿಸಿದ. ನೋಡು ಮಧು ನಿನ್ನನ್ನು ಈ ತರ ನಾನು ಯಾವತ್ತೂ ನೋಡಿದವನಲ್ಲ ನಿನ್ನೊಳಗಿನ ಪ್ರಶ್ನೆ ಏನೆಂದು ಕೂಡ ನೀನು ಹೇಳುತ್ತಿಲ್ಲ ಒಂದಂತೂ ಸತ್ಯ ಕಣೊ ನೀ ನಕ್ಕರೆ ನಾನು ನಗ್ತೀನಿ ನಿನಗಿಲ್ಲದ ಖುಷಿ ನನಗೂ ಬೇಡ ನಿನ್ನ ಮದುವೆ ಮುಗಿಯುವವರೆಗೂ ನನ್ನ ಮದುವೆಯ ಕನಸನ್ನು ಕಾಣಲ್ಲ ಎಂದವನೆ ಬಾಯ್ ಅನ್ನುತ್ತಾ ಪಕ್ಕದಲ್ಲಿ ನಿಂತಿದ್ದ ಬಸ್ಸೇರಿ ಕುಳಿತೇಬಿಟ್ಟ.ಮಧುವಿನ ನೋವಿಗೆ ಉಪ್ಪು ಖಾರ ಸೇರಿಸಿದಂತಾಯಿತು,ಹುಚ್ಚು ಹಿಡಿದವನಂತೆ ಕಾರು ತಿರಿಗಿಸಿ ಓವರ್ ಸ್ಪೀಡಾಗಿ ಡ್ರೈವ್ ಮಾಡುತ್ತಿರಬೇಕಾದರೆ ಸಡನ್ನಾಗಿ……?
(ಮುಂದುವರಿಯುವುದು)













