
ಬೆಳಗಾವಿ: ಸರ್ಕಾರವು ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ನವರಾತ್ರಿ ಸಂದರ್ಭದಲ್ಲಿ ಗುಡ್ ನ್ಯೂಸ್ ನೀಡಲಿದ್ದು ಅದೇನೆಂದರೆ ಎರಡು ತಿಂಗಳ ಹಣ ಅಕ್ಟೋಬರ್ನಲ್ಲಿ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಮೂಡಲಗಿ ತಾಲೂಕಿನ ಕಲ್ಲೋಳ್ಳಿಯಲ್ಲಿ ಮಾತನಾಡಿದ ಹೆಬ್ಬಾಳ್ಕರ್ ತಾಂತ್ರಿಕ ಕಾರಣದಿಂದ ಎರಡು ತಿಂಗಳ ಕಂತಿನ ಹಣ ತಡವಾಗಿತ್ತು. ಇದೇ ಅ.7 ಮತ್ತು 9 ರಂದು ಎರಡೂ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲಿದೆ ಎಂದರು.













