
ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಜಯಂತಿಯ ಅಂಗವಾಗಿ ಜಾರ್ಕಳದಿಂದ ಕುಕ್ಕುಂದೂರು ಪಿಲಿಚAಡಿ ಸ್ಥಾನದ ವರೆಗೆ ಎನ್ಎಸ್ಎಸ್ ಹಾಗೂ ಎನ್ ಸಿಸಿ ವಿದಾರ್ಥಿಗಳಿಂದ ಸ್ವಚ್ಚತಾ ಅಭಿಯಾನ ಅ 02 ರಂದು ಜರಗಿತು. ಈ ಸಂದರ್ಭದಲ್ಲಿ ಕುಕ್ಕುಂದೂರಿನ ಉದ್ಯಮಿಗಳಾದ ತ್ರಿವಿಕ್ರಮ ಕಿಣಿಯವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗ ಳಿಗೆ ಸ್ವಚ್ಚತೆ ಮತ್ತು ಪರಿಸರ ಸಂರಕ್ಷಣೆಯ ಮಾಹಿತಿಯನ್ನು ನೀಡಿದರು.

ಈ ಸಂಧರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಕುಕ್ಕುಂದೂರು ಪಂಚಾಯತ್ ಸದಸ್ಯರಾದ ರೆಹಮತುಲ್ಲಾ ಹಾಗೂ ಉದ್ಯಮಿಗಳಾದ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಸ್ವಚ್ಚ್ಚತಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಪ್ರಾಂಶುಪಾಲರಾದ ದಿನೇಶ್ ಎಂ ಕೊಡವೂರು , ಉಪ ಪ್ರಾಂಶುಪಾಲರಾದ ಸಾಹಿತ್ಯ , ಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ವಾಣಿ ಕೆ ಹಾಗೂ NSSಮತ್ತು NCC ಅಧಿಕಾರಿಗಳು ಉಪಸ್ತಿತರಿದ್ದರು. ಕಾರ್ಯಕ್ರಮ ನಿರ್ವಹಣೆಯನ್ನು ಆಂಗ್ಲ ಭಾಷಾ ಉಪನ್ಯಾಸಕಿ ದರ್ಶಿನಿ ನೆರವೇರಿಸಿದರು.














