“ನಿವೇಶನ ಸಂಪತ್ತು ಪತಿಯ ಗೌರವಕ್ಕಿಂತ ದೊಡ್ಡದಲ್ಲ”,
ನಿವೇಶನಗಳನ್ನು ವಾಪಸ್ ಮಾಡುವುದಾಗಿ ಆಯುಕ್ತರಿಗೆ ಪತ್ರ

ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮೂಡ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಪತ್ರದ ಮೂಲಕ, ಆಯುಕ್ತರಿಗೆ ನಿವೇಶನಗಳನ್ನು ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಪತಿಯ ವಿರುದ್ಧ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದು ನನಗಾಗಲಿ, ನನ್ನ ಕುಟುಂಬಕ್ಕಾಗಲಿ ಬಯಸದೆ ಇದ್ದ ಈ ನಿವೇಶನಗಳು ತೃಣಕ್ಕೆ ಸಮ. ನಿವೇಶನ, ಮನೆ, ಆಸ್ತಿ ಯಾವುದು ಕೂಡ ತನ್ನ ಪತಿಯ ಗೌರವ, ಘನತೆ ಮರ್ಯಾದೆ ಕ್ಕಿಂತ ದೊಡ್ಡದಲ್ಲ. ಆದರಿಂದ ವಿವಾದಕ್ಕೆ ಕಾರಣವಾಗಿರುವ ಈ ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ತನ್ನ ಪತಿಯಾಗಿರುವ ,ರಾಜ್ಯದ ಸಿಎಂ ಸಿದ್ದರಾಮಯ್ಯನವರು 40 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವು ಅಂಟಿಸಿಕೊಳ್ಳದೆ ನೈತಿಕತೆಯನ್ನು ಪಾಲನೆ ಮಾಡಿದ್ದಾರೆ. ರಾಜಕೀಯವು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟುಮಾಡಬಾರದು ಎಂದು ನಿರ್ಧಾರಕಾಗಿ ಬದ್ಧಳಾಗಿ ಬದುಕಿದ್ದೇನೆ. ರಾಜಕೀಯ ಕ್ಷೇತ್ರದಿಂದ ದೂರವಿರುವ ತನಗೆ ದ್ವೇಷ ಸಾಧನೆಗಾಗಿ ರಾಜಕೀಯ ಕಣಕ್ಕೆ ಎಳೆದು ತನ್ನ ಘನತೆ ಗೌರವಗಳಿಗೆ ಹಾನಿ ಮಾಡಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.













