30.8 C
Udupi
Saturday, April 25, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ- 12)

ಚೇತನ್ ವರ್ಕಾಡಿ

ಮಾತು ಬಾರದೆ ಸುಮ್ಮನಾದ.ಸೌಂದರ್ಯ ಮಾತು ಮುಂದುವರಿಸಿದಳು.ಹಾಯ್ ಮಧು ಏನ್ ಶಾಕ್ ಆಯ್ತ ಎಂದು ಮಧುವನ್ನೆ ಪ್ರೀತಿಯ ಕಣ್ಣುಗಳಿಂದ ನೋಡುತ್ತಾ ಹೇಳಿದಾಗ!ಅಯ್ಯೋ ಏನ್ ಶಾಕ್ ಅದ್ ಸರಿ ನೀನ್ ಯಾಕೆ ಇಲ್ಲಿವರೆಗೆ ಬಂದ್ಬಿಟ್ಟೆ ,ಏನು ವಿಷಯ ಎಂದು ಮಧು ಏನು ತಿಳಿಯದವನಂತೆ ಕೇಳಿದಾಗ!ಅಲ್ಲ ಮಧು ನೀವು ಹುಡುಗಿನ ನೋಡ್ಕೊಂಡು ಹೋಗಿ ಒಂದು ತಿಂಗಳು ಆಗುತ್ತಾ ಬಂತು ಅಲ್ಲ ನಿಮ್ ಒಪ್ಪಿಗೆ‌ನೆ ತಿಳಿಸಿಲ್ಲ!ಅದು ಬಿಡಿ ನಿಮ್ಗೆ ನಾನು ಒಪ್ಪಿಗೆ ಆಗಿದ್ದೀನಿ ಅಂತ ಗೊತ್ತು ಆದರೆ ನನ್ ಫೋನ್ ಯಾಕೆ ರಿಸೀವ್ ಮಾಡಲ್ಲ ಎಂದು ಕೇಳಿದಾಗ!ಏನು ಉತ್ತರಿಸೋದು ಅನ್ನೋದನ್ನೆ ತಿಳಿಯದ ಮಧು ಅದು ಅದು ಮಂಗಳ ಎಂದು ಬಾಯಿ ತಪ್ಪಿ ಅಂದೇಬಿಟ್ಟ.ಸೌಂಧರ್ಯಳಿಗೆ ಇದರ ಒಳಗುಟ್ಟು ತಿಳಿಯದೆ ಅದ್ಯಾರ್ ಮಂಗಳ ಮಧು ನಮ್ ಮಧ್ಯದಲ್ಲಿ ನಮ್ಮೂರಲ್ಲೊಬ್ಲು ಹುಡುಗಿ ಇದ್ದಾಳಪ್ಪ ಅವಳಲ್ಲ ತಾನೆ ಎಂದು ತಮಾಷೆ‌ಯಾಗಿ ಹೇಳ್ಬೆಕಾದ್ರೆ!ಇಲ್ಲ ಇಲ್ಲ ಮಂಗಳೂರಿನ ಫ್ರೆಂಡ್ ಒಬ್ಬ ಕಾಲ್ ಮಾಡಿದ್ದ ಹಾಗೆ ಬಾಯಿತಪ್ಪಿ ಮಂಗಳೂರು ಅನ್ಬೇಕಾದ್ರೆ ನೀನು ಅರ್ಧಕ್ಕೆ ನಿಲ್ಲಿಸಿ‌ಬಿಟ್ಟೆ ಎಂದು ಮಾತನ್ನು ಎಲ್ಲಿಂದಲೋ ಎಲ್ಲಿಗೆ ತಿರುಗಿಸಿ ದಡಸೇರಿಸಿಬಿಟ್ಟ.ಮಧು ನಾನು ನಿನಗೆ ಇಷ್ಟ ತಾನೆ ಮತ್ತೆ ಸೌಂದರ್ಯ ಅದೇ ಪ್ರಶ್ನೆ‌ಯನ್ನೇ ಮುಂದಿಟ್ಟಾಗ ಅದು ಅದು ಎಂದು ಮಧು ಪದಗಳಿಗೆ ಹುಡುಕಬೇಕಾದರೆ!ಕಿಸೆಯಲ್ಲಿದ್ದ ಮೊಬೈಲ್ ರಿಂಗಾಗತೊಡಗಿತು.ಅಬ್ಬಾ ಬದುಕಿದೆ ಎಂದು ಮನದಲ್ಲೇ ಅಂದುಕೊಂಡವಣೆ ಕಿಸೆಯಲ್ಲಿದ್ದ ಮೊಬೈಲ್ ತೆಗೆದು ನೋಡಬೇಕಾದರೆ ತಂದೆಯಿಂದ ಕಾಲ್ ಬರುತ್ತಿದ್ದುದನ್ನು ನೋಡಿ!ಇವರು ಯಾಕಪ್ಪಾ ಈಗ ಕಾಲ್ ಮಾಡಿದ್ದಾರೆ ಎಂದು ಆಲೋಚಿಸುತ್ತಾ, ರಿಸೀವ್ ಮಾಡಿ ಹಲೋ ಹೇಳಿ ಡ್ಯಾಡಿ ಏನ್ ವಿಶೇಷ ಎಂದು ಕೇಳಬೇಕಾದರೆ ನನ್ದ್ ಏನೊ ವಿಶೇಷ ನಿನ್ನ ಎದುರಲ್ಲೇ ಇದೆ ಅಲ್ವ ವಿಶೇಷ ಎಂದು ಹೇಳಿ ಮುಗಿಸುವಷ್ಟರಲ್ಲೆ ಇದೆಲ್ಲಾ ನಿನ್ ಪ್ಲೇನಾ ಎಂದು ಹಲ್ಲುಕಚ್ಚುತ್ತಾ ಫೋನ್ ಕಟ್ ಮಾಡಿಯೆ ಬಿಟ್ಟ.ಇತ್ತ ಸೌಂದರ್ಯ ಬಿಡುವಂತಿಲ್ಲ ಅತ್ತ ಮನೆಯವರು ಕೇಳುವಂತಿಲ್ಲ.ನೋಡು ಸೌಂಧರ್ಯ ನಾನು ಈಗ ಯಾವ ವಿಷಯವನ್ನು ಮಾತನಾಡುವ ಸ್ಥಿತಿ‌ಯಲ್ಲಿಲ್ಲ ಒಂದು ಎರಡು ದಿವಸ ಕಳೆಯಲಿ ಫ್ರೀ ಆದ್ ಮೇಲೆ ನಿನಗೆ ಕಾಲ್ ಮಾಡ್ತೀನಿ ಆಫೀಸ್‌ನ ಸಮಸ್ಯೆ‌ಗಳೆ ಹೆಚ್ಚಾಗಿ‌ದೆ ಇವಾಗ ಯಾವ ಡಿಶಿಷನ್ ತೆಗೆಯೊಕ್ಕೂ ಆಗಲ್ಲ ಪ್ಲೀಸ್ ಇವಾಗ ಹೋಗ್ತಿಯಾ ಎಂದು ಹೇಳಬೇಕಾದರೆ!ಸೌಂದರ್ಯ‌ಳಿಗೆ ಅದೇನೊ ಅನುಮಾನ‌ದ ಸುಳಿವು ಕಾಡತೊಡಗಿತು.ಸರಿ ಅಂದವಳೆ ಅಲ್ಲಿಂದ ನೇರಾ ಮನೆಕಡೆ ಹೊರಟೇಬಿಟ್ಟಳು…
ಅದು ರಾತ್ರಿ 1ರ ಸಮಯ….

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page