
ವಿದ್ಯೆಯು ಒಂದು ಮಹತ್ವದ ಸಂಪತ್ತಾಗಿದೆ,ಏಕಾಗ್ರತೆಯ ಓದು ಹೆಚ್ಚು ಪರಿಣಾಮಕಾರಿ ಆಗಬಹುದು, ಕಷ್ಟದ ವಿಷಯ ಗಳಿಗೆ ಪ್ರಾಮುಖ್ಯತೆ ಹೆಚ್ಚಾಗಿ ನೀಡಬೇಕು ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು, ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಸಮಯದ ಸದ್ಬಳಕೆ ಮಕ್ಕಳಿಗೆ ತುಂಬಾ ಅಗತ್ಯವಿದೆ ಜೊತೆಗೆ ಯೋಗ ಮತ್ತು ವ್ಯಾಯಾಮ ಶಿಕ್ಷಣಕ್ಕೆ ಪೂರಕವಾದ ವಿಷಯ ಎಂದು ನಮ್ಮ ಶಾಲೆಯ ಹಳೆ ವಿದ್ಯಾರ್ಥಿಗಳೂ ದಾನಿಗಳೂ ಆದ ಗಣಪತಿ ಜೋಶಿ ಬೆಂಗಳೂರು ಇವರು ಮಕ್ಕಳಿಗೆ ವಿವರಿಸಿದರು.
ಸೆ. 30 ಸೋಮವಾರ ದಂದು ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇಲ್ಲಿ ವಿದ್ಯೆಯ ಮಹತ್ವ ಮತ್ತು ಪರೀಕ್ಷೆ ಪೂರ್ವ ತಯಾರಿಯ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಇವರು ಮಾತನಾಡುತ್ತಿದ್ದರು ಮುಖ್ಯೋಪಾಧ್ಯಾಯಾರಾದ ಶ್ರೀಮತಿ ಪೂರ್ಣಿಮಾ ಶೆಣೈ ,
ಶಿಕ್ಷಕ ವೃಂದ ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಅನುಪಮಾ ಜೋಯ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.








































