
ನವದೆಹಲಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಿಕೆಯ ತುಪ್ಪ ಬಳಕೆಯ ವಿಚಾರವಾಗಿ ಅರ್ಜಿ ಸಲ್ಲಿಸಿದ ಹಿನ್ನೆಲೆ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದೆ.
ಈ ವೇಳೆ ಸುಪ್ರೀಂ ಕೋರ್ಟ್ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಆಂಧ್ರಪ್ರದೇಶದ ಸರಕಾರಕ್ಕೆ ಹಲವು ವಿಚಾರಗಳನ್ನು ಪ್ರಶ್ನಿಸಿದೆ ಎನ್ನಲಾಗಿದೆ.
ತಿರುಪತಿ ಲಡ್ಡು ಪ್ರಸಾದ ವಿಚಾರವಾಗಿ, ಪ್ರಸಾದಕ್ಕಾಗಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಪರೀಕ್ಷೆಗೆ ಒಳಪಡಿಸಿದ ತುಪ್ಪವು ತಿರಸ್ಕೃತ ತುಪ್ಪ ಎಂದು ವರದಿಗಳು ಸೂಚಿಸುತ್ತವೆ ಎನ್ನುವ ಮೂಲಕ ಲಡ್ಡು ಪ್ರಸಾದ ವಿಷಯದಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು. ಕನಿಷ್ಠ ಪಕ್ಷ ರಾಜಕೀಯದಿಂದ ದೇವರುಗಳನ್ನು ದೂರ ಬಿಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನ್ಯಾಯ ಪೀಠವು ಅಭಿಪ್ರಾಯ ಪಟ್ಟಿದೆ.













