
ಹುಬ್ಬಳ್ಳಿ:ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ತನ್ನ ಪತ್ನಿ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಮೀರ್ ಆಚಾರ್ಯ ತನ್ನ ಮಗಳು ಅಳುತ್ತಿದ್ದ ಕಾರಣಕ್ಕೆ ಮನೆಯ ಕೆಲಸದಲ್ಲಿ ತೊಡಗಿದ್ದ ಶ್ರಾವಣಿ ಮೇಲೆ ಕೋಪಗೊಂಡಿದ್ದು ಅಲ್ಲದೆ ಸಮ್ಮಿರಾಚಾರ್ಯ ಅವರ ತಂದೆ ಕೂಡ ಸೊಸೆ ಶ್ರಾವಣಿಗೆ ಬೈದಿದ್ದಾರೆ. ಹೀಗೆ ಆರಂಭವಾದ ಜಗಳ ಅತಿರೇಕಕ್ಕೆ ಹೋಗಿದ್ದು ಸಮೀರ್ ಆಚಾರ್ಯ, ಅವರ ತಂದೆ ಹಾಗೂ ತಾಯಿ ಸೇರಿಕೊಂಡು ಮನಬಂದಂತೆ ಶ್ರಾವಣಿ ಮೇಲೆ ಹಲ್ಲೆ ಮಾಡಿದ್ದಾರೆ.
ಗಲಾಟೆ ವೇಳೆ ಶ್ರಾವಣಿ instagram ನಲ್ಲಿ ಲೈವ್ ಹೋಗಿದ್ದು ಸಮೀರ್ ಅವರ ಫೋನನ್ನು ಒಡೆದು ಹಾಕಿ ಕೈ ಮುಖಕ್ಕೆ ಗಾಯಗೊಳಿಸಿದ್ದಾರೆ.
ಪತಿ ಹಾಗೂ ಅತ್ತೆ ಮಾವರ ವರ್ತನೆಯಿಂದ ಬೇಸರಗೊಂಡ ಶ್ರಾವಣಿ ಅವರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೆ ಇತ್ತ ಸಮೀರ್ ಅವರ ಪೋಷಕರು ಕೂಡ ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌನ್ಸಿಲಿಂಗ್ ಮೂಲಕ ದಂಪತಿಯನ್ನು ಒಂದು ಮಾಡಿದ ಬಳಿಕ ಕಂಪ್ಲೇಂಟ್ ವಾಪಸ್ ತೆಗೆದುಕೊಂಡು ಮತ್ತೆ ಈ ರೀತಿ ಮಾಡದಂತೆ ಅರ್ಜಿ ಬರೆದು ಕೊಟ್ಟು ಮನೆಗೆ ವಾಪಸ್ ಮರಳಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.













