ಹಿಂದೂಗಳಿಗೆ ಅವಮಾನ, ಬಿಜೆಪಿಯಿಂದ ಆಕ್ರೋಶ ವ್ಯಕ್ತ

ನವದೆಹಲಿ: ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ, ಕರೆಯಬೇಕಾಗಿದ್ದ ವ್ಯಕ್ತಿಗಳನ್ನು ಬಿಟ್ಟು ಅಮಿತಾಬ್ ,ಅದಾನಿ ಅಂಬಾನಿಯಂತಹ ದೊಡ್ಡ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಕಾರ್ಮಿಕರನ್ನು, ರೈತರನ್ನು ಆಹ್ವಾನಿಸಲಾಗಿಲ್ಲ. ಅದೊಂದು ನಾಚ್ ಗಾನ (ನೃತ್ಯ) ಕಾರ್ಯಕ್ರಮವಾಗಿದ್ದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಾಣ ಪ್ರತಿಷ್ಠೆ ಸಮಾರಂಭವನ್ನು ನೃತ್ಯ ಕಾರ್ಯಕ್ರಮಕ್ಕೆ ಹೋಲಿಸಿರುವುದು ಹಿಂದುಗಳಿಗೆ ಮಾಡಿದ ಅವಮಾನ ಎನ್ನುವ ನಿಟ್ಟಿನಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ವಕ್ತಾರ ಶೆಹೆಜಾದ್ ಪುನಾವಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಖೇದನೀಯ ಎನ್ನುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.













