
ಮಹಿಳೆಯೊಬ್ಬರು ರೀಲ್ಸ್ ಹುಚ್ಚಿನಿಂದ ಲೈಕ್ಸ್ ವೀವ್ಸ್ಗಾಗಿ ತೆರೆದ ಬಾವಿಯ ಅಂಚಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಡೇಂಜರಸ್ ರೀಲ್ಸ್ ಮಾಡಿದ್ದು ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.
ಮಹಿಳೆಯೊಬ್ಬರು RawAndRealMan ಹೆಸರಿನ ಎಕ್ಸ್ ಖಾತೆಯಲ್ಲಿ ಈ ರೀಲ್ಸ್ ಹಂಚಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಬರೀ ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡುತ್ತಿದ್ದಳು.
ಈ ಪೋಸ್ಟ್ ಸಪ್ಟೆಂಬರ್ 18ರಂದು ಹಂಚಿಕೊಂಡಿದ್ದು 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಕೆಲವರು ʼಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದರೆ ಇನ್ನು ಕೆಲವರು ʼಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆʼ ಎಂಬ ಕಾಮೆಂಟ್ ಹಾಕಿದ್ದು ಮಹಿಳೆಯ ಹುಚ್ಚಾಟದ ವಿರುದ್ಧ ಗರಂ ಆಗಿದ್ದಾರೆ.













