28.2 C
Udupi
Friday, April 24, 2026
spot_img
spot_img
HomeBlogಮಂಗಳ

ಮಂಗಳ

ಕಥೆ (ಭಾಗ-3)

ಚೇತನ್ ವರ್ಕಾಡಿ

ಮಂಗಳ ತಾನು ಆಯ್ತು ತನ್ನ ಕೆಲಸ ಆಯ್ತು ಅನ್ನೊ ರೀತಿ ಕಾರು ಬರುತ್ತಿರುವ ದಾರಿಯ ಬದಿಯಿಂದ ತಂದೆಗೆ ಬೆಳಿಗ್ಗಿನ ಉಪಹಾರ‌ವನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.ಸುತ್ತಲೂ ಹೊಲಗದ್ದೆಗಳಲ್ಲಿ ಪೈರು ತುಂಬಿ ತುಳುಕಾಡುತ್ತಿರುವ ಸೊಬಗು ನೋಡುವುದೆ ಆನಂದ..
ರೀ ಅವಳ ಜಡೆ ನೋಡ್ರಿ ಕಣ್ಣೇ ಕುಕ್ಕುವ ತರ ಹಾಗಿದೆ ಅಲ್ವೇನ್ರಿ ಎಂದು ಕಾರಿನೊಳಗಿದ್ದ ಮಧುಕರನ ತಾಯಿ ತನ್ನ ಗಂಡನ ಬಳಿ ದೂರದಿಂದಲೇ ಕಾಣುತ್ತಿದ್ದ ಮಂಗಳನ ಕೇಶರಾಶಿಯನ್ನು ನೋಡಿ ಈ ರೀತಿ ಹೇಳಿದಾಗ!ಅಲ್ಲ ಕಣೆ ಆ ಪಾಪದ ಹುಡುಗಿಯ ಜಡೆ ಮೇಲು ನಿನ್ ಕಣ್ ಬಿತ್ತೇನೆ!ಈ ಹೆಂಗಸರಿಗೆ ಏನನ್ನು ನೋಡಿದ್ರು ಹೊಟ್ಟೆ ಕಿಚ್ಚು ಪಡೊ ಹುಚ್ಚು ತುಂಬಾನೆ ಹೆಚ್ಚು ಅಲ್ವ ಮಧು ಎಂದು ಸೋಮಶೇಖರರಾಯರು ಅವರ ಹೆಂಡತಿ ಸುಗಂಧಿಯನ್ನು ಹೀಯಾಳಿಸುತ್ತಾ ಹತ್ತಿರ ಕುಳಿತು ಡ್ರೈವಿಂಗ್ ಮಾಡುತ್ತಿದ್ದ ಮಗನ ಮುಂದೆ ತಮಾಷೆ‌ಯಾಗಿ ಮಾತನಾಡುತ್ತಿದ್ದರು.ಇದನ್ನು ಕೇಳಿದ ಸುಗಂಧಿ ಮರುಮಾತನಾಡದೆ ಕೋಪಬಂದವಳಂತೆ ಹಾಗೆ ಸುಮ್ಮನಾದಳು.ಇದನ್ನು ತನ್ನ ಕಾರಿನೊಳಗಿನ ಮಿರರ್‌ನಿಂದ ನೋಡಿದ ಮಧು!ಏನ್ ಮಮ್ಮಿ ನೀನು ಡ್ಯಾಡಿ ತಮಾಷೆ‌ಗೆ ಹೇಳಿದ್ರು ಅಷ್ಟೆ ಅದಕ್ಕೆ ಈ ತರ ಕೋಪನ!ಸ್ವಲ್ಪ ನಗಮ್ಮ ನಾವು ಹುಡುಗಿ ನೋಡೋಕೆ ಹೋಗೊದು ಅಲ್ವ ಎಂದು ಮಧು ತಾಯಿಯನ್ನು ಓಲೈಸಿದಾಗ!ಮುದ್ದು ಮಗನ ಮಾತಿಗೆ ಬೆಲೆ ಕೊಟ್ಟ ಸುಗಂದಿ ನಗುಮುಖವನ್ನು ಅರಳಿಸಿದಳು.ಲೋ ಮಧು ಸುಂದರರಾಯರ ಮನೆ ಎಲ್ಲಿ ಎಂದು ಸರಿಯಾಗಿ ಗೊತ್ತಾಗ್ತಿಲ್ಲ ಫೋನ್ ಮಾಡೋಣ ಅಂದ್ರೆ ನಟ್‌ವರ್ಕ್ ಪ್ರಾಬ್ಲಂ ಆ ಹುಡುಗಿ ಅತ್ರ ಕಾರ್ ನಿಲ್ಸಿ ಸ್ವಲ್ಪ ಅಡ್ರಸ್ ಕೇಳಿ ಕ್ಲೀಯರ್ ಮಾಡ್ಕೊಳೊ ಎಂದು ತಂದೆ ಹೇಳಿದಾಗ ಆಯ್ತು ಡ್ಯಾಡಿ ಎಂದ ಮಧುಕರ!ಮಂಗಳನ ಹತ್ತಿರ ಬರುತ್ತಿದ್ದಂತೆಯೆ ಕಾರನ್ನು ನಿಲ್ಲಿಸಿಯೆ ಬಿಟ್ಟ.ಬಲಭಾಗದಿಂದಲೆ ನಡೆದುಕೊಂಡು ಹೋಗುತ್ತಿದ್ದ ಮಂಗಳ ಕಾರು ತನ್ನ ಬಳಿ ನಿಂತಿರುವುದನ್ನು ಕಂಡವಳೆ ತಾನು ಅಲ್ಲೇ ನಿಂತು ಕಾರಿನ ಕಡೆಗೆ ಮುಖಮಾಡಿದಳು.ಮಧು ಮೆಲ್ಲ ಕಾರಿನ ಗ್ಲಾಸನ್ನು ಕೆಳಗೆ ಇಳಿಸುತ್ತಿದ್ದಂತೆಯೆ ಮಂಗಳನ ಮುಖದರ್ಶನವಾಯಿತು.ಅವಳ ಮುದ್ದಾದ ಮುಖವನ್ನು ನೋಡಿದ ಮಧುಕರನ ಮನದೊಳಗೆ……….?

(ಮುಂದುವರಿಯುವುದು)

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page