ಸ್ವಂತ ಲಾಭಕ್ಕಾಗಿ, ಹಿಂದುತ್ವದ ಜಪ ಮಾಡುವ ಮಹಾವೀರ್ ಹೆಗ್ಡೆ ಯವರಿಂದ ನಮ್ಮ ನಾಯಕ ಪಾಠ ಕಲಿಯುವ ಅಗತ್ಯವಿಲ್ಲ: ರಮೇಶ್ ಬಜಕಳ ತಿರುಗೇಟು

ಕಾರ್ಕಳ : ಜಾತ್ಯಾತೀತ ನಿಲುವಿನೊಂದಿಗೆ ರಾಜಕೀಯ ಪ್ರವೇಶಿಸಿದ ಮಾಹಾವೀರ ಹೆಗ್ಡೆ ಇಂದು ತನ್ನ ಸ್ವಂತ ಲಾಭಕ್ಕಾಗಿ ಹಿಂದುತ್ವ ಜಪ ಮಾಡುತ್ತಿರುವುದನ್ನು ಕಾರ್ಕಳ ಜನರು ಚೆನ್ನಾಗಿ ಅರಿತು ಕೊಂಡಿದ್ದಾರೆ ಎಂದು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ.
ತಮ್ಮ ಸರ್ಕಾರದ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಬಂದ ಕಪ್ಪು ಹಣದಿಂದ ಕಾರ್ಕಳ ನಗರದಲ್ಲಿ ಕಾನೂನು ಬಾಹಿರ ಬಹುಮಡಿಯ ಕಟ್ಟಡ ನಿರ್ಮಾಣ ಮೂಲಕ ಅಕ್ರಮ ಆಸ್ತಿ ಸಂಪಾದಿಸುತ್ತಿರುವ ಮಹಾವೀರ ಹೆಗ್ಡೆಯವರಿಂದ ಉದಯ ಕುಮಾರ್ ಶೆಟ್ಟಿ ಪಾಠ ಕಲಿಯುವ ಅಗತ್ಯವಿಲ್ಲ. ಎಂದು ರಮೇಶ್ ಬಜಕಳ ಅವರು ಹೇಳಿದ್ದಾರೆ.
ಮಹಾವೀರ ಹೆಗ್ಡೆ ಯವರ ಬೇನಾಮಿ ಅಸ್ತಿಗಳನ್ನು ಈಗಾಗಲೇ ದಾಖಲೆ ಸಂಗ್ರಹಿಸುತ್ತಿದ್ದು ಸಂಬಂಧ ಪಟ್ಟ ಇಲಾಖೆಗೆ ಮುಂದಿನ ದಿನಗಳಲ್ಲಿ ದೂರು ನೀಡಲು ಸಿದ್ದತೆ ಪಡಿಸುತ್ತಿದ್ದೇವೆ.
ನಕಲಿ ಮೂರ್ತಿ ನಿರ್ಮಾಣ ಮಾಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡು ನಕಲಿ ಮೂರ್ತಿ ನಿರ್ಮಾಣದ ಮೂಲಕ ಕಲಾವಿದರ ಹೆಸರಿಗೆ ಮುಸಿ ಬಳಿದ ಕೃಷ್ಣ ನಾಯ್ಕ್ ಅವರ ಪರ ನಿಂತು ಸಮರ್ಥಿಸಿ ಕೊಂಡಾಗ ಈ ಅವ್ಯವಹಾರದಲ್ಲಿ ಶಾಸಕರ ಜೊತೆ ಮಹಾವೀರ ಹೆಗ್ಡೆ ಅವರು ಪಾಲು ಪಡೆದಿರುವುದು ವ್ಯಕ್ತವಾಗುತ್ತಿದೆ.
ಅಕ್ರಮ ಎಸಗಿದವನಿಗೆ ಮತ್ತೆ ಮತ್ತೆ ಟೆಂಡರ್ ಕೊಡುವ ಸಂಪ್ರದಾಯ ಮುಂದುವರೆಸಿಕೊಂಡು ಹೋಗುವುದಾದರೆ ಇದು ಬಿಜೆಪಿಯ ತತ್ವ ಸಿದ್ದಾಂತ ಅನ್ನುದು ಸಾಭೀತಾಗುತ್ತೆ. ಕಂಚಿನ ವಿಗ್ರಹ ನಿರ್ಮಾಣ ಮಾಡುವಂತೆ ಸೂಚಿಸಿದರೂ ಕೃಷ್ಣ ನಾಯ್ಕ್ ಅವರು ಇದ್ಯಾವುದನ್ನು ಮಾಡದೇ ನಕಲಿ ವಿಗ್ರಹ ತಯಾರಿಸಿ ದೇವರಿಗೆ ಹಾಗೂ ಜನತೆಯನ್ನು ಯಾಮಾರಿಸಲು ಹೋಗಿ ಸಿಕ್ಕಿ ಬಿದ್ದಿರುವುದು ಸ್ಪಷ್ಟವಾಗುತ್ತಿದೆ.
ಒಬ್ಬ ಕಳ್ಳನ ಪರವಾಗಿ ಬಂದು ಬ್ಯಾಟ್ ಬೀಸುತ್ತಿರುವ ಬಿಜೆಪಿಗರು ಎಂತವರು ? ..ಎಂದು ಇಂದು ನಾವು ಪ್ರಶ್ನಿಸ ಬೇಕಾಗಿದೆ. ನಕಲಿ ಪರಶುರಾಮನ ವಿಗ್ರಹ ನಿರ್ಮಿಸಿದ ಕೃಷ್ಣನಾಯ್ಕ ಅವರನ್ನು ಸಮರ್ಥಿಸುವುದು ಕಂಡಾಗ ಅತನ ಜೊತೆ ಉಳಿದವರು ಪಾಲು ಪಡೆದುಕೊಂಡಿರುವುದಾಗಿ ಇದೀಗ ಸಾಭೀತಾಗುತ್ತಿದೆ.
ಅದರಲ್ಲಿ ಒಂದು ಪಾಲು ಮಹಾವೀರ ಹೆಗ್ಡೆ ಪಡೆದುಕೊಂಡಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ತಾವು ಮಾಡಿದ ತಪ್ಪುಗಳನ್ನು ಇನ್ನಾದರೂ ಒಳ್ಳೆಯ ಮನಸ್ಸಿನಿಂದ ಒಪ್ಪಿಕೊಂಡು ಸಮಸ್ತ ಜನತೆಯ ಮುಂದೆ ಕ್ಷಮೆ ಕೇಳಿ ಎಂದು ರಮೇಶ್ ಬಜಕಳ ತಿಳಿಸಿದ್ದಾರೆ.













