
ರೋಟರಿ ಕ್ಲಬ್ ಕಾರ್ಕಳ ಹಾಗೂ ವರ್ಧಮಾನ ವಿದ್ಯಾ ಸಂಸ್ಥೆ ಕಾರ್ಕಳ ಸಹಭಾಗಿತ್ವದಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಇಲ್ಲಿ ದಿನಾಂಕ ಸೆಪ್ಟೆಂಬರ್ 19 ರಂದು ರಂದು “Good touch & Bad touch” ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಪ್ರಸೂತಿ ತಜ್ಞರಾದ ಡಾ. ಸಂಜಯ ಕುಮಾರ್.ಕೆ.ಆರ್.ರವರು ನಮ್ಮ ಬಗ್ಗೆ ನಾವು ಹೇಗೆ ಜಾಗರೂಕರಾಗಿರಬೇಕು, ಅಪರಿಚಿತರೊಂದಿಗೆ ಅಂತರವನ್ನು ಇಟ್ಟುಕೊಳ್ಳುವುದು. “ನಮ್ಮ ದೇಹಕ್ಕೆ ನಾವೇ ಯಜಮಾನರು,”ವಿವಿಧ ವ್ಯಕ್ತಿಗಳೊಂದಿಗೆ, ವಿವಿಧ ಸನ್ನಿವೇಶಗಳಲ್ಲಿ ನಾವು ಹೇಗೆ ಜಾಗರೂಕರಾಗಿರಬೇಕು ಎಂಬ ಬಗ್ಗೆ ಮಕ್ಕಳಿಗೆ ಮನಮುಟ್ಟುವಂತೆ ಅರ್ಥಪೂರ್ಣವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ಅಧ್ಯಕ್ಷರಾದ ರೋ. ಇಕ್ಬಾಲ್ ಅಹಮದ್, ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಕುಮಾರಯ್ಯ ಹೆಗ್ಡೆ, ಶಶಿಕಲಾ. ಕೆ .ಹೆಗ್ಡೆ, ಪಿಡಿಜಿ ಡಾಕ್ಟರ್ ಭರತೇಶ್, ಜಗದೀಶ್ ಹೆಗ್ಡೆ, ರೋ. ರೇಖಾ ಉಪಾಧ್ಯಾಯ, ರೋ. ವಸಂತ್ ಎಂ.ರೋ ಬಾಲಕೃಷ್ಣ ದೇವಾಡಿಗ, ರೋ. ಮಮತಾ, ರೋ. ಗೀತಾ ಕಾಮತ್, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವರ್ಧಮಾನ್ ಸಂಸ್ಥೆಯ ಆಡಳಿತಾಧಿಕಾರಿಯಾದ ಕರ್ತವ್ಯ ಜೈನ್ ರವರು ಕಾರ್ಯಕ್ರಮ ನಿರೂಪಿಸಿದರು. ರೋ. ವಸಂತ್ ಎಂ. ವಂದನಾರ್ಪಣೆ ಗೈದರು.
































































































































