29.1 C
Udupi
Friday, April 24, 2026
spot_img
spot_img
HomeBlogಕಾರ್ಕಳ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, "ಹದಿಹರೆಯದ ಸಮಸ್ಯೆ"ಗಳ ಬಗ್ಗೆ ಡಾ. ಚಂದ್ರಿಕಾ ಕಿಣಿಯವರಿಂದ...

ಕಾರ್ಕಳ ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, “ಹದಿಹರೆಯದ ಸಮಸ್ಯೆ”ಗಳ ಬಗ್ಗೆ ಡಾ. ಚಂದ್ರಿಕಾ ಕಿಣಿಯವರಿಂದ ಕಾರ್ಯಗಾರ


ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೊಂಡರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಿಕಾ ಕಿಣಿ ಅವರು ಹದಿಹರೆಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡುತ್ತಾ, ತಮ್ಮ ದೇಹದ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಆರೋಗ್ಯದ ಸಮಸ್ಯೆಯಿಂದ ಮುಕ್ತವಾಗಬೇಕು.

ಋತುಚಕ್ರದ ಸಮಯದಲ್ಲಿ ಬರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಆ ಸಮಯದಲ್ಲಿ ಆಗುವ ತೊಂದರೆಗಳಿಗೆ ಸಲಹೆ ನೀಡಿದರು. ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಿ. ಮಕ್ಕಳು ತಂದೆ ತಾಯಿ ಹಾಗೂ ಗುರುಗಳ ಬುದ್ಧಿ ಮಾತನ್ನು ಮತ್ತು ಸರಿಯಾದ ಮಾರ್ಗದರ್ಶವನ್ನು ಪಡೆದುಕೊಳ್ಳಲು ತಿಳಿಸಿದರು. ಹೆಣ್ಣು ಮಕ್ಕಳಿಗೆ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶಗಳ ಬಗ್ಗೆ ಮಾಹಿತಿ ನೀಡಿ ಅದರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂದು ತಿಳಿಸಿದರು. ಯಾವುದೇ ರೀತಿಯ ಸಮಸ್ಯೆಗಳು ಬಂದರೆ ಚೈಲ್ಡ್ ಹೆಲ್ತ್ ಲೈನಿಗೆ ಕರೆ ಮಾಡಿ ಎಂದು ತಮ್ಮ ಕಾರ್ಯಗಾರದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page