ಡಿಸೆಂಬರ್ 22ರಂದು ನಡೆಯಲಿದೆ “ಮಹಾ ಚಂಡಿಕಾಯಾಗ”
ಸೆ. 22ರಂದು ಪೋಸ್ಟರ್ ಬಿಡುಗಡೆ ಸಮಾರಂಭ

ನಾರಾವಿಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಊರ ಪರವೂರ ಸದ್ಭಕ್ತರ , ಪೂಜ್ಯ ಸ್ವಾಮೀಜಿಗಳ ಹಾಗೂ ಧಾರ್ಮಿಕ ಕ್ಷೇತ್ರದ ಗಣ್ಯರ ಕೂಡುವಿಕೆಯಲ್ಲಿ ಲೋಕ ಕಲ್ಯಾಣಾರ್ಥವಾಗಿ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪರಸ್ಪರ ಯುವಕ ಮಂಡಲ ಈದು ನಾರಾವಿ ಇವರ ನೇತೃತ್ವದಲ್ಲಿ ಮಹಾ ಚಂಡಿಕಾಯಾಗ ಡಿಸೆಂಬರ್ 22ರಂದು` ನಡೆಯಲಿದೆ.
ಅದರ ಪೂರ್ವಭಾವಿ ಕಾರ್ಯಕ್ರಮವಾಗಿ ಚಂಡಿಕಾ ಯಾಗದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇದೇ ಬರುವ ಸೆಪ್ಟೆಂಬರ್ 22ರಂದು ರವಿವಾರ ಬೆಳಗ್ಗೆ 9-30 ಕ್ಕೆ `ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಊರ ಭಕ್ತ ಜನರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಗುರುಪ್ರಸಾದ್ ನಾರಾವಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಂಧು- ಭಗಿನಿಯರು ಭಾಗವಹಿಸುವಂತೆ ಆಮಂತ್ರಿಸಲಾಗಿದೆ.













