
ಮುದ್ರಾಡಿ: ಸೆ. 17 ರಂದು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ವನ್ನು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ.ಅನುದಾನಿತ ಪ್ರೌಢ ಶಾಲೆ ಯಲ್ಲಿ ರತ್ನಾಕರ ಪೂಜಾರಿ ಜನಜಾಗೃತಿ ಸದಸ್ಯರು ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು.
..ಸಂಪನ್ಮೂಲ ವ್ಯಕ್ತಿಗಳಾದ ಸೀತಾರಾಮ್ ಹೆಬ್ಬಾರ್ ಮಕ್ಕಳಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಮಕ್ಕಳ ಪಾತ್ರದ ಬಗ್ಗೆ ಮಾಹಿತಿ ನೀಡಿ, ಮಕ್ಕಳಿಗೆ ‘ಪ್ರತಿಜ್ಞೆ ಮಾಡಿಸಿದರು ಯೋಜನಾಧಿಕಾರಿ ಗಳಾದ ಶ್ರೀಮತಿ ಲೀಲಾವತಿಯವರು ಮಕ್ಕಳು ಶಿಸ್ತುಬದ್ಧ ಜೀವನ ಹೇಗೆ ನಡೆಸಬೇಕು ಎಂದು ತಿಳಿಸಿದರು. ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಮಂಜುನಾಥ ಪೂಜಾರಿಯವರು,ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಇಂದಿರಾ ಬಾಯರಿ ರವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸುಮಲತಾರವರು ಕಾರ್ಯಕ್ರಮ ವನ್ನು ನಿರೂಪಿಸಿದರು ಸೇವಾ ಪ್ರತಿನಿಧಿ ಮಮತಾ ಸ್ವಾಗತಿಸಿದರು. ಸೇವಾಪ್ರತಿನಿಧಿ ವನಿತಾ ಸಹಕರಿಸಿದರು.ಶಿಕ್ಷಕರಾದ ಆನಂದರವರು ವಂದಿಸಿದರು.













