ನಾಳೆ (ಸೆ.16) ಲೋಕಾರ್ಪಣೆ
ಗುಣಮಟ್ಟದೊಂದಿಗೆ ರಿಯಾಯಿತಿ ದರದಲ್ಲಿ ಮಾರಾಟ

ಕಾರ್ಕಳ: ಉತ್ತರ ಕನ್ನಡದ ಕಡಲತೀರದ ತಾಲೂಕುಗಳಾದ ಕಾರವಾರ, ಕುಮಟಾ, ಹೊನ್ನಾವರ ತಾಲೂಕಿನಲ್ಲಿ ಬೃಹತ್ ಬಟ್ಟೆ ಮಳಿಗೆಯಾಗಿ ಅಭೂತಪೂರ್ವ ಯಶಸ್ಸು ಕಂಡಿರುವ ಅವತಾರ ಸಿಲ್ಸ್‌ನ ಮಳಿಗೆ ಕಾರ್ಕಳದ ಶ್ರೀ ವೆಂಕಟರಮಣ ದೇವಳದ ಬಳಿಯ ಶ್ರೀ ಸುಧೀಂದ್ರ ರೆಸಿಡೆನ್ಸಿಯಲ್ಲಿ ಸೆ.16ರಂದು ಬೆಳಗ್ಗೆ 10 ಲೋಕಾರ್ಪಣೆಗೊಳ್ಳಲಿದೆ.
ಮದುವೆ, ಮುಂಜಿ ಸೇರಿದಂತೆ ಎಲ್ಲ ಕಾರ್ಯ ಗಳಿಗೆ ಅಗತ್ಯವಿರುವ ವಿನೂತನ ವಿನ್ಯಾಸದ ನವನವೀನ ಸೀರೆಗಳು, ಮಹಿಳೆಯರು ಧರಿಸುವ ಎಲ್ಲ ಬಗೆಯ ಗುಣಮಟ್ಟದ ಉಡುಪುಗಳು ರಿಯಾಯಿತಿ ದರದಲ್ಲಿ ಮಾರಾಟಗೊಳ್ಳಲಿದೆ.
ಬಟ್ಟೆಗಳ ಉದ್ಯಮದಲ್ಲಿ ಹೆಸರು ಗಳಿಸಿದ ಪ್ರತಿಷ್ಠಿತ ಕಂಪನಿಗಳಲ್ಲಿ ಸಿದ್ದಪಡಿಸಿದ ಕಾಂಜೀವರಂ, ಧರ್ಮಾವರಂ, ಇಳ್ಳಲ್, ಮಧುಬಾನಿ, ಬನಾರಸಿ, ಕೊಲ್ಕತ್ತಾ, ಬಾಗಲ್‌ಪುರಿ, ಕೋಟ, ಕಲಂಕಾರಿ, ಶಿಫಾನ್, ಜಿನೋನ್ ಸೇರಿದಂತೆ 18ಕ್ಕೂ ಅಧಿಕ ರಾಜ್ಯಗಳಲ್ಲಿ ಪ್ರಸಿದ್ಧಿ
ಪಡೆದುಕೊಂಡಿರುವ ಮನಮೋಹಕ ಸೀರೆಗಳು ಅವತಾರ್ ಸಿಲ್ಸ್ ಮಳಿಗೆಯಲ್ಲಿ ಲಭ್ಯವಿದ್ದು, ಯೋಗ್ಯ ಬೆಲೆಯಲ್ಲಿ ನೀಡಲಾಗುತ್ತಿದೆ.
ಮಹಿಳೆಯರ ಅಚ್ಚುಮೆಚ್ಚಿನ ಲೆಹಂಗಾ, ಕುರ್ತಿಸ್, ಚೂಡಿದಾರ್, ಟಾಪ್ಸ್ ಮತ್ತಿತರ ಬಗೆಬಗೆಯ ಉಡುಪುಗಳ ಸಂಗ್ರಹ ಅವತಾರ್ ಸಿಲ್ಕ್ ಮಳಿಗೆಯಲ್ಲಿ ಸಿಗಲಿದ್ದು, ಇಷ್ಟವಾದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳಬಹು ದಾಗಿದೆ. ಮಳಿಗೆಯಲ್ಲಿ ಸೇವೆ ಸಲ್ಲಿಸುವ ನಗು ಮೊಗದ ಸಿಬ್ಬಂದಿ ಗ್ರಾಹಕರ ಅಭಿಪ್ರಾಯಗಳಿಗೆ ತಕ್ಕಂತೆ ಅಗತ್ಯವಾದ ಉಡುಪುಗಳನ್ನು ಪ್ರದರ್ಶಿಸುವುದರೊಂದಿಗೆ ಸಂತಸದಿಂದ ಬಟ್ಟೆಗಳನ್ನು ಖರೀದಿಸಬಹುದು.
ಗ್ರಾಹಕರ ಅನುಕೂಲಕ್ಕಾಗಿ ಇದೀಗ ಕಾರ್ಕಳ ದಲ್ಲಿ ಮಳಿಗೆಯನ್ನು ತೆರೆಯಲಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಪ್ರತಿಷ್ಠಿತ ಕಂಪನಿಗಳ ಸೀರೆಗಳು ಸೇರಿದಂತೆ ಮಹಿಳೆಯರ ಉಡುಪುಗಳನ್ನು ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.













