
ಗದಗ: ಒಂದು ವಾರದಿಂದ ಸುದ್ದಿಯಲ್ಲಿದ್ದ ಅಡುಗೆ ಎಣ್ಣೆ ದರ ಶನಿವಾರ ದಿಡೀರನೆ ಏರಿಕೆ ಕಂಡಿದೆ. ಲೀಟರ್ ಗೆ ಸುಮಾರು 20 ರಿಂದ 25 ರೂ. ಏರಿಕೆಯಾಗಿದೆ.
ಸಾಲು ಸಾಲು ಹಬ್ಬಗಳ ನಡುವೆ ಅಡುಗೆ ದರಗಳ ದಿಢೀರ್ ಏರಿಕೆ ಜನರಿಗೆ ಆಘಾತ ಉಂಟುಮಾಡಿದೆ. ಅಡುಗೆ ಎಣ್ಣೆ ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಸೇರಿದ್ದು ಆಮದು ಸುಂಕ ಹೇರಿದ ಕಾರಣ ಹೆಚ್ಚುವರಿಯಾಗಿ ಶೇ. 20ರಷ್ಟು ಬೆಲೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ಹಿಂದೆ ಲೀಟರಿಗೆ ಪ್ಯಾಕೆಟ್ ಗೆ 98 ರೂಪಾಯಿ ಇದ್ದ ಬೆಲೆ ಈಗ 120 ರೂ. ಆಗಿದೆ .15 ಲೀಟರ್ ಪ್ಯಾಕೆಟ್ ಗಳಿರುವ ತಾಳೆ ಎಣ್ಣೆ ಬಾಕ್ಸ್ ಗೆ 1,450 ರೂಪಾಯಿ ಇದ್ದು ಶುಕ್ರವಾರ ಸಂಜೆ ಬೆಳಿಗ್ಗೆ ಸುಮಾರು 1,650 ರಿಂದ 1700 ರೂ.ವರೆಗೆ ಏರಿಕೆಯಾಗಿದೆ.













