
ಕಾರ್ಕಳ: ಸಾಂಪ್ರದಾಯಿಕ ಮದುವೆ ಸೀರೆಗಳಿಗೆ ಕಾರವಾರ,ಕುಮಟಾ,ಮತ್ತು ಹೊನ್ನಾವರ ಭಾಗಗಳಲ್ಲಿ ಪ್ರಖ್ಯಾತಿಗಳಿಸಿರುವ ಸಂಸ್ಥೆ “ಅವತಾರ್ ಸಿಲ್ಕ್” ಇದೀಗ ಕಾರ್ಕಳದಲ್ಲಿ ತನ್ನ ಶಾಖೆ ತೆರೆಯಲಿದೆ.
ಇದೇ ಬರುವ ಸೆ. 16, ಬೆಳಗ್ಗೆ 10 ಗಂಟೆಗೆ ಸೋಮವಾರ ವೆಂಕಟರಮಣ ದೇವಸ್ಥಾನದ ಬಳಿಯ ಶ್ರೀ ಸುಧೀಂದ್ರ ರೆಸಿಡೆನ್ಸಿಯಲ್ ನಲ್ಲಿ ಅವತಾರ್ ಸಿಲ್ಕ್ ಗಣ್ಯರ ಉಪಸ್ಥಿತಿಯಲ್ಲಿ ಶುಭರಾಂಭ ಗೊಳ್ಳಲಿದೆ. ಮುಖ್ಯ ಅತಿಥಿಯಾಗಿ , ಗಾಯತ್ರಿ ಕ್ಯಾಶ್ಯೂನ ಬೋಳ ಪ್ರಭಾಕರ್ ಕಾಮತ್ , ಅತಿಥಿಗಳಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಖ್ಯಸ್ಥರಾದ ಕೆ ಜೈರಾಮ ಪ್ರಭು, ರಾಷ್ಟ್ರೀಯ ತರಬೇತುದಾರರಾದ ಕೆ. ರಾಜೇಂದ್ರ ಭಟ್, ಜಿಲ್ಲಾ ರಾಜ್ಯೋತ್ಸವ ವಿಜೇತೆ ವಂದನಾ ರೈ, ಸುಧೀಂದ್ರ ರೆಸಿಡೆನ್ಸಿನ ಮಾಲಕರಾದ ಜಗದೀಶ್ ಶೆಣೈ ಮತ್ತಿತರರ ಉಪಸ್ಥಿತಿ ಇರಲಿದೆ . ಇಲ್ಲಿ ಮಹಿಳೆಯರ ಉಡುಪುಗಳ ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಬೃಹತ್ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ.













