
ಬೆಂಗಳೂರು: ಬಿಎಸ್ಎನ್ಎಲ್ ಮಹತ್ವದ ಬದಲಾವಣೆಯೊಂದಿಗೆ ಈಗಾಗಲೇ ತನ್ನ ಛಾಪು ಮೂಡಿಸಿದ್ದು ಇದೀಗ ಹೊಸ ಆಫರ್ ಘೋಷಿಸಿದೆ. ಕೇವಲ 397 ರೂಪಾಯಿಗೆ ಅನ್ಲಿಮಿಟೆಡ್ ಕಾಲ್ಸ್ ಹಾಗೂ ಡೇಟಾ ಆಫರ್ ನೊಂದಿಗೆ150 ದಿನ ಅಂದರೆ 5 ತಿಂಗಳ ವ್ಯಾಲಿಟಿಡಿ ನೀಡಿದೆ.
ಪ್ರಮುಖವಾಗಿ ಈ 397 ರೂ. ನ ಪ್ಲಾನ್ ಬಿಎಸ್ಎನ್ಎಲ್ ಸಿಮ್ನ್ನು ಎರಡನೇ ಸಿಮ್ ಆಗಿ ಬಳಸುತ್ತಿರುವ ಗ್ರಾಹಕರಿಗೆ ನೀಡಿದೆ. ಈ ಪ್ಲಾನ್ ರಿಚಾರ್ಜ್ ಮಾಡಿದ್ದಲ್ಲಿ, ಆರಂಭಿಕ 30 ದಿನ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್ಸ್ ಸೌಲಭ್ಯ ಸಿಗಲಿದೆ. ಆರಂಭಿಕ 30 ದಿನ ಪ್ರತಿ ದಿನ 2 ಜಿಬಿಯಂತೆ ಒಟ್ಟು 60 ಜಿಬಿ ಡೇಟಾ ಜೊತೆಗೆ ಆರಂಭಿಕ 30 ದಿನ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ.
150 ದಿನ ವ್ಯಾಲಿಟಿಡಿ ಕಾರಣ, ಇನ್ಕಮಿಂಗ್ ಕಾಲ್ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅನ್ಲಿಮಿಟೆಡ್ ಕಾಲ್ಸ್ ಅವಧಿ ಮುಗಿದರೆ ಕಡಿಮೆ ಬೆಲೆಗೆ ಟಾಪ್ ಅಪ್ ಅವಕಾಶವನ್ನು ನೀಡಲಾಗಿದೆ. ಇದು ಡೇಟಾ ರಿಚಾರ್ಜ್ಗೂ ಅನ್ವಯಿಸಲಿದೆ. ಐದು ತಿಂಗಳಿಗೆ 397 ರೂಪಾಯಿ ರಿಚಾರ್ಜ್ ಮಾಡಿದರೆ ಪ್ರತಿ ತಿಂಗಳಿಗೆ ಸರಾಸರಿ 80 ರೂಪಾಯಿ ರೀಚಾರ್ಜ್ ಮಾಡಿದಂತೆ ಆಗಲಿದೆ. ಇದು ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ ಪ್ಲಾನ್ ಆಗಿದೆ.
ಬಿಎಸ್ಎನ್ಎಲ್ ಈಗಾಗಲೇ 4ಜಿ ಸೇವೆಯನ್ನು ಜಾರಿಗೊಳಿಸಿದ್ದು ಖಾಸಗಿ ಕಂಪನಿಗಳ ಪೈಪೋಟಿಯಿಂದ ಸೊರಗಿದ್ದ ಬಿಎಸ್ಎನ್ಎಲ್ಗೆ ಹೊಸ ಜೀವಕಳೆ ನೀಡಲಾಗಿದೆ. ಕೇಂದ್ರ ಸರ್ಕಾರ ಭರ್ಜರಿ ಹೂಡಿಕೆ ಮಾಡಿ ಟೆಲಿಕಾಂ ಸೇವೆಯನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಿಸಿದೆ. ಇದೀಗ 5ಜಿ ಸೇವೆ ನೀಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ













