
ಬೆಂಗಳೂರು: ಜೂನ್ 01: ದೇಶಾದ್ಯಂತ 2024 ರ ಲೋಕಸಭಾ ಚುನಾವಣೆ ಏಳು ಹಂತದಲ್ಲಿ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಇಂದು(ಶನಿವಾರ) ಪ್ರಕಟವಾಗಿದ್ದು, ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಎಷ್ಟು ಸ್ಥಾನವನ್ನ ಗೆಲ್ಲಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಏರಲಿದ್ದು 3 ನೇ ಬಾರಿ ನರೇಂದ್ರ ಮೋದಿ ಅಧಿಕಾರಕ್ಕೆ ಏರಲಿದ್ದಾರೆ ಎಂದು ಚುನಾಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿವೆ.ಇಂಡಿಯಾ ನ್ಯೂಸ್ ಎನ್‌ಡಿಎಗೆ 371 ಸ್ಥಾನ ನೀಡಿದರೆ INDIA ಒಕ್ಕೂಟಕ್ಕೆ 125, ಇತರರಿಗೆ 47 ಸ್ಥಾನ ನೀಡಿವೆ. ಪಿ ಮಾರ್ಕ್ ಎನ್‌ಡಿಗೆ 359 ಸ್ಥಾನ, INDIA ಒಕ್ಕೂಟಕ್ಕೆ 154, ಇತರರಿಗೆ 30 ಸ್ಥಾನ ನೀಡಿದೆ.ಮಾಟ್ರಿಜ್ ಎನ್‌ಡಿಎಗೆ 353-368, INDIA ಒಕ್ಕೂಟಕ್ಕೆ 118-133, ಇತರರಿಗೆ 30 ಸ್ಥಾನ ನೀಡಿದೆ.2019ರ ಚುನಾವಣೆಯಲ್ಲಿ ಬಿಜೆಪಿ 303 ಪಡೆದರೆ ಎನ್‌ಡಿಎ 353 ಸ್ಥಾನ ಗೆದ್ದುಕೊಂಡಿತ್ತು. ಕಾಂಗ್ರೆಸ್ 52 , ಯುಪಿಎ 91 ಸ್ಥಾನ ಗೆದ್ದುಕೊಂಡಿತ್ತು.