27.7 C
Udupi
Wednesday, November 4, 2026
spot_img
spot_img
HomeBlog17ರ ವಯೋಮಾನದ ಬಾಲಕ - ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾಟ ಉದ್ಘಾಟನೆ,

17ರ ವಯೋಮಾನದ ಬಾಲಕ – ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾಟ ಉದ್ಘಾಟನೆ,

ಕಂಗೆಡದೆ ಬದುಕನ್ನು ಮುನ್ನಡೆಸಲು ಕ್ರೀಡೆ ಸ್ಪೂರ್ತಿ : ಡಾ. ಅಶೋಕ್ ಕಾಮತ್

ಕ್ರೀಡೆಯು ಸೋಲನ್ನು ಸ್ವೀಕರಿಸುವ ಹಾಗೂ ಸವಾಲಾಗಿ ಎದುರಿಸುವ ಭಾವನೆಯನ್ನು
ಮೂಡಿಸುತ್ತದೆ. ಇದನ್ನು ಜೀವನದಲ್ಲೂ ಅನುಸರಿಸಬೇಕು. ಕ್ಷÄಲ್ಲಕ ವಿಚಾರಗಳಿಗೆ
ಕಂಗೆಡದೆ ದೃಢವಿಶ್ವಾಸದಿಂದ ಬದುಕನ್ನು ಮುನ್ನಡೆಸಲು ಕ್ರೀಡೆ ಸದಾ
ಸ್ಫೂರ್ತಿಯಾಗುತ್ತದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ
ಡಯೆಟ್‌ನ ಪ್ರಾಂಶುಪಾಲರಾದ ಡಾ.ಅಶೋಕ್ ಕಾಮತ್ ಹೇಳಿದರು.

ಇವರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ
ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ, ಗಣಿತನಗರ ಇವರ ಸಹಯೋಗದೊಂದಿಗೆ
17ರ ವಯೋಮಾನದ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ
ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ
ವಿಜಯ ಕುಮಾರ್ ಶೆಟ್ಟಿ ಮಾತನಾಡಿ ಮನಸು ಹಾಗೂ ಬುದ್ದಿಗಳೆರಡರ ಸಮ್ಮಿಲನದ
ಪಂದ್ಯಾಟವೇ ಚೆಸ್. ರಾಜ್ಯಮಟ್ಟದಲ್ಲಿ ಈ ಪಂದ್ಯಾಟವನ್ನು ಸಂಘಟಿಸಿದ ಸಂಘಟಕರಿಗೆ ಹಾಗೂ ಕ್ರೀಡೆ
ಯಶಸ್ವಿಯಾಗಿ ನಡೆಯಲು ಸಹಕರಿಸಿದ ಸರ್ವರನ್ನು ಶ್ಲಾಘಿಸಿದರು.
ಇನ್ನೋರ್ವ ಅತಿಥಿಯಾಗಿದ್ದ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ
ಶ್ರೀ ಕುಸುಮಾಕರ ಶೆಟ್ಟಿ ಮಾತನಾಡಿ, ಕ್ರೀಡೆ ಎನ್ನುವುದು ಮನುಷ್ಯನ ಜೀವನದ
ಅವಿಭಾಜ್ಯ ಅಂಗ. ಉತ್ತಮ ಆರೋಗ್ಯವು ಕ್ರೀಡೆಯಿಂದ ದೊರಕುತ್ತದೆ. ಚದುರಂಗವು
ಬುದ್ಧಿಗೆ ವ್ಯಾಯಾಮ ಕೊಟ್ಟು ಚತುರರನ್ನಾಗಿಸುತ್ತದೆ. ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ
ಗೆದ್ದು ರಾಷ್ಟ್ರಮಟ್ಟದ ಸಾಧನೆ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು
ಮಾತನಾಡಿ ಮನಸ್ಸಿದ್ದಲ್ಲಿ ಮಾರ್ಗವಾಗಬೇಕೆ ಹೊರತು ಸಿಕ್ಕಿದ ಮಾರ್ಗಗಳೆಲ್ಲವೂ
ಮನಸ್ಸಾಗಬಾರದು. ಜೀವನದಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕಾದರೆ ಇನ್ನೊಬ್ಬರಿಗೆ ಚಪ್ಪಾಳೆ
ತಟ್ಟಬೇಕು. ಅಂಕಗಳು ಮಾತ್ರ ಜೀವನವನ್ನು ನಿರ್ಧರಿಸುವುದಿಲ್ಲ. ಜೀವನದಲ್ಲಿ ಶಿಸ್ತು,
ಸಹನೆ, ತಾಳ್ಮೆ ನಿರಂತರ ಶ್ರಮದಿಂದ ಮಾತ್ರ ಸಾಧನೆಯ ಶಿಖರವನ್ನೇರಲು ಸಾಧ್ಯ
ಎಂದರು.
ವೇದಿಕೆಯಲ್ಲಿ ಕಾರ್ಕಳ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಗಿರಿಜಮ್ಮ ಎಸ್ ಆರ್,
ಉಮಾನಾಥ ಕಾಪು ಅಧ್ಯಕ್ಷರು ಚೆಸ್ ಅಸೋಸಿಯೇಷನ್, ಕಾರ್ಕಳ ತಾಲೂಕು ದೈಹಿಕ
ಶಿಕ್ಷಕರ ಸಂಘದ ಅಧ್ಯಕ್ಷರು ಸಂತೋಷ್ ಕುಮಾರ್ ಶೆಟ್ಟಿ, ತಾಲೂಕು
ಸ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷರಾದ ರಮಾನಂದ ಶೆಟ್ಟಿ, ವಿವಿಧ ತಾಲೂಕಿನ
ಟಿ.ಪಿ.ಇ.ಒಗಳಾದ ಸತ್ಯನಾರಾಯಣ, ರವೀಂದ್ರ ನಾಯಕ್ ಹಾಗೂ ನಿತ್ಯಾನಂದ ಶೆಟ್ಟಿಯವರು
ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ರವಿಚಂದ್ರಕಾರAತ್ ಪ್ರಾಸ್ತಾವಿಕ
ನುಡಿಗಳನ್ನಾಡಿದರು. ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು
ಪ್ರೌಢಶಾಲೆಯ ಉಪಪ್ರಾಂಶುಪಾಲೆಯಾದ ಶ್ರೀಮತಿ ವಾಣಿ. ಕೆ ಸ್ವಾಗತಿಸಿ, ರಾಜ್ಯ ದೈಹಿಕ
ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ರಾಜಾರಾಮ್ ಶೆಟ್ಟಿಯವರು ವಂದಿಸಿ, ಉಪನ್ಯಾಸಕಿ
ಕುಮಾರಿ ದರ್ಶಿನಿ ನಿರೂಪಿಸಿ ಹಾಗೂ ವಿದ್ಯಾರ್ಥಿನಿ ಅವನಿ ಕುಡ್ವಾ ಪ್ರಾರ್ಥಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page