28.8 C
Udupi
Thursday, June 25, 2026
spot_img
spot_img
HomeBlog100 ಎಕರೆ ಜಮೀನು ಆರೋಪ ಸಾಬೀತುಪಡಿಸಿ; ಇಲ್ಲದಿದ್ದರೆ ಕ್ಷಮೆ ಕೇಳಿ: ನಿಖಿಲ್ ಕುಮಾರಸ್ವಾಮಿ

100 ಎಕರೆ ಜಮೀನು ಆರೋಪ ಸಾಬೀತುಪಡಿಸಿ; ಇಲ್ಲದಿದ್ದರೆ ಕ್ಷಮೆ ಕೇಳಿ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಕುಟುಂಬದ ಆಸ್ತಿ ವಿಚಾರದಲ್ಲಿ ಆಧಾರರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಎಂ.ಬಿ. ಪಾಟೀಲ್ ಮಾಡಿರುವ 100 ಎಕರೆ ಜಮೀನು ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಪತ್ನಿಯ ಹೆಸರಿನಲ್ಲಿ ಅಷ್ಟೊಂದು ಜಮೀನು ಇದೆ ಎಂಬುದನ್ನು ಸಾಬೀತುಪಡಿಸಬೇಕು. ಸಾಧ್ಯವಾಗದಿದ್ದರೆ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮಾನಹಾನಿ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುಳ್ಳು ಆರೋಪಗಳಿಂದ ರಾಜಕೀಯ ಮಾಡಬಾರದು ಎಂದು ಹೇಳಿದ ನಿಖಿಲ್, ಪೋಸ್ಟರ್ ಅಭಿಯಾನ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇವರೇನು ಬದನೆಕಾಯಿ ಬೆಳೆದು ಸ್ಕೂಲು ಕಾಲೇಜು ಕಟ್ಟಿದ್ದಾರಾ? ನಮಗೂ ಪೋಸ್ಟರ್ ಅಭಿಯಾನ ಮಾಡಲು ಬರುತ್ತದೆ. ಗಂಡಸ್ತನದ ರಾಜಕೀಯ ಮಾಡಿ, ರಾತ್ರೋ ರಾತ್ರಿ ತಲೆ ಮೇಲೆ ಟವೆಲ್ ಹಾಕೊಂಡು ಪೋಸ್ಟರ್ ಅಂಟಿಸೋದನ್ನ ನಮ್ಮ ಕಾರ್ಯಕರ್ತರು ಮಾಡ್ತಾರೆ, ಆದರೆ ಅವರಂತೆ ನಾವು ಕೀಳು ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಬಿಡದಿ ಹಾಗೂ ಬೈರಮಂಗಲ ಭಾಗಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ವಿರುದ್ಧ ಪೋಸ್ಟರ್‌ಗಳನ್ನು ಅಂಟಿಸಿ ಭೂ ಹಗರಣ ಆರೋಪ ಮಾಡಲಾಗಿತ್ತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page