ಮುನಿಯಾಲು ವಿಜಯಲಕ್ಷ್ಮಿ ಆರ್ ಕಾಮತ್ ರವರ “ಜೀವನ ಸಂಗೀತ” ಕವನ ಸಂಕಲನ ಬಿಡುಗಡೆ

ಫೆ.16 ರಂದು ಶಿವಪುರದಲ್ಲಿ ನಡೆದ ಹೆಬ್ರಿ ತಾಲೂಕ ಮಟ್ಟದ ಐದನೇ ಸಾಹಿತ್ಯ ಸಮ್ಮೇಳನದಲ್ಲಿ ಮುನಿಯಾಲಿನ ವಿಜಯಲಕ್ಷ್ಮಿ ಆರ್ ಕಾಮತ್ ಇವರ ಜೀವನ ಸಂಗೀತ ಎಂಬ ಚೊಚ್ಚಲ ಕವನ ಸಂಕಲನವು ಅನಾವರಣಗೊಂಡಿದೆ. ಈ ಸಂದರ್ಭದಲ್ಲಿ ಹೆಬ್ರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸರ್ವ ಸದಸ್ಯರು ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಹಾಗೂ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.














