25.8 C
Udupi
Tuesday, June 9, 2026
spot_img
spot_img
HomeBlogಹೆಬ್ರಿ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ,ಏಳು ಆರೋಪಿಗಳ ಬಂಧನ

ಹೆಬ್ರಿ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ,ಏಳು ಆರೋಪಿಗಳ ಬಂಧನ

ಹೆಬ್ರಿ : ಇಸ್ಪೀಟ್‌ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ಹೆಬ್ರಿ ತಾಲೂಕಿನ ಹೊಸೂರು ಬಳಿ ನಡೆದಿದೆ.ಜೂನ್ 6ರಂದು ಸಂಜೆ ಹೆಬ್ರಿ ಗ್ರಾಮದ ಹೊಸೂರು ಎಂಬಲ್ಲಿ ಇಸೀಟು ಜುಗಾರಿ ಆಟ ನಡೆಸುತ್ತಿದ್ದ ಮಾಹಿತಿ ಪಡೆದ ಕಾರ್ಕಳ ವೃತ್ತ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದರು.

ಈ ಸಮಯದಲ್ಲಿ ಚಪ್ಪರ ಹಾಕಿ ಮೇಲ್ಗಡೆ ಟರ್ಪಾಲ್ ಹಾಸಿ ಮದ್ಯದಲ್ಲಿ ಒಂದು ವಿದ್ಯುತ್ ಬಲ್ಟ್ ಅವಡಿಸಿ ಟೇಬಲ್‌ ಮೇಲೆ ಬಟ್ಟೆ ಹಾಸಿ ಸುತ್ತಲೂ ಕುಳಿತು ಇಸ್ಪೀಟ್ ಎಲೆಗಳಿಂದ ಅಂದ‌ರ್ ಬಾಹ‌ರ್ ಜೂಜಾಟ ಆಡುತ್ತಿರುವುದು ಕಂಡುಬಂದಿತ್ತು.ಆರೋಪಿಗಳಾದ ಮಂಗಳೂರು ಜಪ್ಪಿನ ಮೊಗರಿನ ವಿಜೇಶ್ ಕುಮಾರ (40), ಮೂಲ್ಕಿ ಕಾರ್ನಾಡಿನ ದಸ್ತಗೀರ್ (33), ಕುಡುಪು ಗ್ರಾಮದ ರೋಹಿತ್ (34), ಎಂಬುವವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ 23,970 ರೂ ಹಣ ಹಾಗೂ 35,000 ರೂ ಮೌಲ್ಯದ 5 ಮೊಬೈಲ್‌ಗಳು, ಇಸ್ಟೀಟು ಕಾರ್ಡ್‌ಗಳು, ಟೇಬಲ್‌, ಕುರ್ಚಿಗಳನ್ನು ಹಾಗೂ ವಿದ್ಯುತ್ ಬೆಳಕಿಗಾಗಿ ಮಾಡಿಕೊಂಡ ಬ್ಯಾಟರಿ ಹಾಗೂ ಅದರ ಪರಿಕರಗಳನ್ನು ಮತ್ತು ಇಸ್ಪೀಟು ಜೂಜಾಟಕ್ಕೆ ಬರಲು ಬಳಸಿದ 3 ಕಾರುಗಳು, 2 ಮೋಟಾರ್ ಸೈಕಲ್ ಹಾಗೂ 1 ಸ್ಕೂಟರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ತನಿಖೆ ಮುಂದುವರಿಸಿದಾಗ ದಾಳಿಯ ಸಮಯ ಓಡಿ ಹೋಗಿ ತಲೆಮರೆಯಿಸಿಕೊಂಡಿದ್ದ ಆರೋಪಿಗಳಾದ ಕಾರ್ಕಳ ಕುಕ್ಕೂಂದೂರು ಗ್ರಾಮದ ವಿಜಯ (39) ಜಾರ್ಕಳದ ಮಹೇಶ್ (26) ಉಡುಪಿ ಉದ್ಯಾವರ ಕಿಶೋರ್ ಕುಮಾರ್ (46), ಕಾರ್ಕಳ ಜೋಡುರಸ್ತೆಯ ಸಂತೋಷ್ ಆಚಾರ್ಯ (35) ರನ್ನು ಇದೀಗ ಬಂಧಿಸಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 27/26 ಕಲಂ. 80 ಕರ್ನಾಟಕ ಪೊಲೀಸ್ ಕಾಯಿದೆ ಮತ್ತು 112 ಬಿಎನ್‌ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page