
ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ ಮತ್ತು ಗ್ರಾಮ ಪಂಚಾಯತ್ ಮರ್ಣೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 17/11/2024 ನೇ ರವಿವಾರ ಸ್ವಚ್ಛತಾಭಿಯಾನ ಮಾಸಾಚರಣೆ – 2024 ನ್ನು “ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – ೨” ಬಿಡುಗಡೆ ಸಮಾರಂಭದ ಮೂಲಕ ಅಂತಿಮಗೊಳಿಸಲಾಯಿತು.
ತಂಡದ ಮೂಲ ಆಶಯ ವ್ಯಕ್ತಿತ್ವ ವಿಕಸನ ಮತ್ತು ನೈತಿಕ ಮೌಲ್ಯವರ್ಧನೆ ಸರಣಿ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಇದರ ಅಧ್ಯಕ್ಷರಾದ ಜಿತಕಾಮಾನಂದ ಸ್ವಾಮೀಜಿಯವರು ವ್ಯಕ್ತಿತ್ವ ನಿರ್ಮಾಣ ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಎಂಬ ಕುರಿತು ಪ್ರವಚನ ಮಾಲಿಕೆಯನ್ನು ಸಂಯೋಜನೆ ಮಾಡಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವೇಂದ್ರ ಭಟ್ ವಹಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಭಾವತಿ ನಾಯಕ್, ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಆನಂದ ಹೆಗ್ಡೆ, ಕಾರ್ಕಳ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ, ಹರಿಪ್ರಸಾದ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸುಸಂದರ್ಭದಲ್ಲಿ ಥೈಲ್ಯಾಂಡ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿರುವ ಕುll ಅನನ್ಯ, ಯೋಗಸನದಲ್ಲಿ ವಿಶ್ವ ಮಟ್ಟದ ದಾಖಲೆ ನಿರ್ಮಿಸಿರುವ ಪ್ರತ್ಯಕ್ಷ ಕುಮಾರ್ ಹೆಗ್ಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡುವ ಜಾಗೃತಿಮಿತ್ರ ಪುರಸ್ಕಾರಕ್ಕೆ ಭಾಜನರಾದ ಗಣಪತಿ ಆಚಾರ್ಯ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸುಶಾಂತ್ ಪ್ರಾರ್ಥನೆ, ವಿಘ್ನೇಶ್ ಪೂಜಾರಿ ಸ್ವಾಗತ, ವಿಷ್ಣುಪ್ರಸಾದ ಸ್ವಾಮೀಜಿಯವರ ಕಿರುಪರಿಚಯ, ಶ್ರೀಪಾದ ಹೆಗ್ಡೆ ಪ್ರಾಸ್ತಾವಿಕ, ಕುllವಿನುತಾ ಅಭಿನಂದನೆ, ಸತೀಶ ಹೆಗ್ಡೆ, ಧನ್ಯವಾದ, ಶ್ರೀಕಾಂತ್ ಭಟ್ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.



















