31.9 C
Udupi
Monday, June 1, 2026
spot_img
spot_img
HomeBlogಸ್ವಚ್ಛ ಕಾರ್ಕಳ ಬ್ರಿಗೇಡ್ ನ ವಿನೂತನ ಅಭಿಯಾನ - "ಸ್ವಚ್ಛತೆಯೊಂದಿಗೆ ಚಾರಣ"

ಸ್ವಚ್ಛ ಕಾರ್ಕಳ ಬ್ರಿಗೇಡ್ ನ ವಿನೂತನ ಅಭಿಯಾನ – “ಸ್ವಚ್ಛತೆಯೊಂದಿಗೆ ಚಾರಣ”

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಆಯೋಜಿಸಲಾದ “ಸ್ವಚ್ಛ ಪರಿಸರ, ಸ್ವಚ್ಛತೆಯೊಂದಿಗೆ ಚಾರಣ” ಅಭಿಯಾನವು 31 ಮೇ 2026, ಭಾನುವಾರ ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಕಾರ್ಕಳ ತಾಲೂಕಿನ ಸುಂದರ ಕೂಡ್ಲು ಜಲಪಾತ ಪ್ರದೇಶದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಅಭಿಯಾನದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್‌ನ 35ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿ, ಚಾರಣದೊಂದಿಗೆ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಚಾರಣದ ಮಾರ್ಗದುದ್ದಕ್ಕೂ ಹಾಗೂ ಜಲಪಾತದ ಸುತ್ತಮುತ್ತ ಪ್ರವಾಸಿಗರು ಎಸೆದು ಬಿಸಾಡಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಉಪಯೋಗಿಸಿದ ಮಕ್ಕಳ ಡೈಪರ್ ಗಳು, ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಸಿಗರೇಟ್ ಪ್ಯಾಕೆಟ್‌ಗಳು ಹಾಗೂ ಇತರ ಕಸಗಳನ್ನು ಸಂಗ್ರಹಿಸಿ ಸುಮಾರು 6 ಗೋಣಿಚಿಲಗಳಷ್ಟು ಕಸಗಳನ್ನು ಸಂಗ್ರಹಿಸಿ ಪರಿಸರ ಸ್ವಚ್ಛತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದರು.

ಸ್ವಚ್ಛತಾ ಕಾರ್ಯದ ಬಳಿಕ ಸದಸ್ಯರು ಕೂಡ್ಲು ಜಲಪಾತದ ನೈಸರ್ಗಿಕ ಸೌಂದರ್ಯವನ್ನು ಸವಿದು, ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

ಈ ಅಭಿಯಾನದ ಯಶಸ್ಸಿಗೆ ಕೂಡ್ಲು ತೀರ್ಥ ಜಲಪಾತದ ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಆರ್‌ಎಫ್‌ಒ (Range Forest Officer) ಅವರ ಅಮೂಲ್ಯ ಸಹಕಾರ ಮತ್ತು ಪ್ರೋತ್ಸಾಹ ಕಾರಣವಾಗಿದ್ದು, ಸ್ವಚ್ಛ ಕಾರ್ಕಳ ಬ್ರಿಗೇಡ್ ಅವರಿಗೆಲ್ಲ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page