
ಬೆಂಗಳೂರು: ಇಂದು ಹೈಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ನಿವೇಶನ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವಿಚಾರಣೆ ನಡೆಯಲಿದೆ.
ಲೋಕಾಯುಕ್ತವು ಪ್ರಕರಣದ ನಾಲ್ವರು ಪ್ರಮುಖ ಆರೋಪಿಗಳಾದ ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಅವರ ವಿಚಾರಣೆ ನಡೆಸಿದ್ದು ಇಂದು ಹೈಕೋರ್ಟ್ಗೆ ತನಿಖಾ ವರದಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅಧಿಕಾರಿಗಳಾದ ಕುಮಾರ್ ನಾಯ್ಕ್, ನಟೇಶ್ ಮತ್ತು ಪಾಲಾಯ್ಯ ವಿಚಾರಣೆ ನಡೆಸಿ ಬಳಿಕ ಸಾಕ್ಷಿಗಳಿಂದ ಹೇಳಿಕೆಯನ್ನು ಕೂಡ ಪಡೆದುಕೊಳ್ಳಲಾಗಿದೆ.



















