31.5 C
Udupi
Thursday, April 30, 2026
spot_img
spot_img
HomeBlog"ಸರಳ ಸಜ್ಜನಿಕೆಯ ವ್ಯಕ್ತಿ, ಅಜಾತಶತ್ರು, ಶ್ರಮಜೀವಿ, ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್ ರಾಜು ಅಗಲುವಿಕೆ ಸಮಾಜಕ್ಕೆ...

“ಸರಳ ಸಜ್ಜನಿಕೆಯ ವ್ಯಕ್ತಿ, ಅಜಾತಶತ್ರು, ಶ್ರಮಜೀವಿ, ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್ ರಾಜು ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ”-ಶಾಸಕ ವಿ. ಸುನಿಲ್ ಕುಮಾರ್ ಸಂತಾಪ

ನೇರ ನಡೆ–ನುಡಿಯ, ಸರಳ ಸಜ್ಜನಿಕೆಯ ವ್ಯಕ್ತಿ, ಅಜಾತಶತ್ರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷರು, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳಲ್ಲಿ ಅಹರ್ನಿಶಿ ದುಡಿದ ಶ್ರಮಜೀವಿ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನ ಸುದೀರ್ಘ ಸೇವೆಯನ್ನು ಮುಡಿಪಾಗಿಟ್ಟ ಡಿ. ಆರ್ ರಾಜು ಅವರ ಅಗಲುವಿಕೆಯಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.


ಸಾರ್ವಜನಿಕ ಸೇವೆಯಲ್ಲಿ ಅವರ ಸುದೀರ್ಘ ಸೇವೆ ಮತ್ತು ಬಡವರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಬೇಕಿದೆ. ಸರಳತೆ, ಮೃದು ಹೃದಯಿಯಾಗಿದ್ದ ಅವರ ಅಗಲುವಿಕೆ ಸಮಾಜಕ್ಕೂ ಅತಿ ದೊಡ್ಡ ನಷ್ಟವಾಗಿದೆ. ಜೀವಿತಾವಧಿಯಲ್ಲಿ ತಮ್ಮದೆ ಆದ ವಿಶಿಷ್ಟ ವ್ಯಕ್ತಿತ್ವದ ಮೂಲಕ ಶುದ್ಧವಾಗಿಟ್ಟುಕೊಂಡು ಬದುಕಿನುದ್ದಕ್ಕೂ ತಾನು ನಂಬಿದ ಮನುಷ್ಯಪರ ತತ್ವ, ಸಿದ್ಧಾಂತಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬಂದ ಅಪರೂಪದ ಮುತ್ಸದ್ದಿ, ಸ್ನೇಹಜೀವಿಯಾಗಿ ಸ್ವಪ್ರಯತ್ನದಿಂದ ರಾಜಕಾರಣ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಒಂದೊಂದೇ ಮೆಟ್ಟಿಲೇರಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ನಿಷ್ಠುರವಾಗಿ ತಮ್ಮ ಬದುಕನ್ನು ಸವೆಸಿದ ಧೀಂಮಂತರು.ಈ ದುಃಖದ ಸಮಯದಲ್ಲಿ ಅವರ ಅಗಲುವಿಕೆ ಸಹಿಸುವ ಶಕ್ತಿಯನ್ನು ಭಗವಂತ ದು:ಖತ್ರಪ್ತ ಕುಟುಂಬಕ್ಕೆ ಕರುಣಿಸಲಿ ಎಂದು ಶಾಸಕ ವಿ ಸುನಿಲ್ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page