26.1 C
Udupi
Wednesday, April 22, 2026
spot_img
spot_img
HomeBlogಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ ) ಬೋಳ ಪಿಲಿಯೂರು 25ನೇ ವರ್ಷದ ರಜತ...

ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ ) ಬೋಳ ಪಿಲಿಯೂರು 25ನೇ ವರ್ಷದ ರಜತ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಬೋಳ -ಪಿಲಿಯೂರು ಮ್ಯಾರಥಾನ್

ಶ್ರೀ ಮಹಾಲಿಂಗೇಶ್ವರ ಯುವಕ ವೃಂದ (ರಿ ) ಬೋಳ ಪಿಲಿಯೂರು ಇವರ 25ನೇ ವರ್ಷದ ರಜತ ಮಹೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಬೋಳ -ಪಿಲಿಯೂರು ಮ್ಯಾರಥಾನ್ 14-9-25 ನೇ ಭಾನುವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೋಳ ಪಿಲಿಯೂರು ಇಲ್ಲಿ ನಡೆಯಿತು.

14 ವರ್ಷದ ಒಳಗಿನ ಬಾಲಕ ಬಾಲಕಿಯರಿಗೆ 2 ಕಿಲೋಮೀಟರ್

17 ವರ್ಷದ ಒಳಗಿನವರಿಗೆ 4 ಕಿಲೋಮೀಟರ್

18 ವರ್ಷ ಮೇಲ್ಪಟ್ಟವರಿಗೆ 8 ಕಿಲೋಮೀಟರ್

40 ವರ್ಷ ಮೇಲ್ಪಟ್ಟವರಿಗೆ 4 ಕಿಲೋಮೀಟರ್ ಸ್ಪರ್ಧೆ ನಡೆಯಿತು.

ನಿಟ್ಟೆ ವಿದ್ಯಾ ಸಂಸ್ಥೆಯ ದೈಹಿಕ ನಿರ್ದೇಶಕರು ಮತ್ತು ಶಿಕ್ಷಕರು ತೀರ್ಪುಗಾರರಾಗಿ ಸಹಕರಿಸಿದರು. ಸಮಾರೋಪ ಸಮಾರಂಭದಲ್ಲಿ ಯುವಕ ವೃಂದದ ಅಧ್ಯಕ್ಷರು ಅಶೋಕ್ ಶೆಟ್ಟಿ ಶಾಂತಿನಿಕೇತನ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಅಶೋಕ್ ಅಡ್ಯoತಾಯ ,ಯುವಕ ವೃಂದದ ಗೌರವಾಧ್ಯಕ್ಷರಾದ ಜಯರಾಮ್ ಸಾಲ್ಯಾನ್ ಬೋಳ, ಉದಯ್ ಶೆಟ್ಟಿ ,ಕಿರಣ್ ಶೆಟ್ಟಿ,ಬೋಳ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ ವಂಜಾರಕಟ್ಟೆ,ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷರು ಅಕ್ಷಯ್ ಅಡ್ಯoತಾಯ, ಯುವಕ ವೃಂದದ ಕಾರ್ಯದರ್ಶಿ ಪ್ರಶಾಂತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ರಾಜ್ಯಮಟ್ಟ ಹಾಗು ರಾಷ್ಟ್ರಮಟ್ಟ ದ ಕ್ರೀಡಾಳುಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾಯಿಸಲಾಯಿತು ತಾರಾನಾಥ್ ಬೋಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಸಂಗೀತ ಕುಲಾಲ್, ನಿಶ್ಮಿತಾ ಶೆಟ್ಟಿ ,ಪವನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಶೆಟ್ಟಿ ಧನ್ಯವಾದ ಅರ್ಪಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page