
ಮನುಷ್ಯನ ದಿನನಿತ್ಯದ ಆಹಾರ ಪದ್ದತಿಯು ಆತನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತ ಇತ್ತೀಚಿನ ದಿನಗಳಲ್ಲಿ ನಾವು ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಮರೆತು ಆಧುನಿಕ ಆಹಾರ ಪದ್ಧತಿ ನಮ್ಮನ್ನು ನಾವು ಅರ್ಪಿಸಿಕೊಂಡಿದ್ದೇವೆ, ಇದರ ಪರಿಣಾಮದಿಂದಾಗಿ ಕಂಡು ಕೇಳರಿಯದ ರೋಗಗಳು ನಮ್ಮನ್ನು ಅಂಟಿಕೊಂಡಿವೆ.

ಇಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ ಉತ್ತಮವಾದ ಆಹಾರ ಪದ್ಧತಿಯನ್ನು ನಾವು ರೂಡಿಸಿಕೊಳ್ಳಬೇಕು ಎಂದು ಡಾ. ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಹಿರಿಯ ಮಕ್ಕಳ ತಜ್ಞರಾದ ಡಾ. ಆಶಾ ಹೆಗ್ಡೆ ಇವರು ಹೇಳಿದರು.ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ಕಾರ್ಕಳ ಡಾ, ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇವುಗಳ ಜಂಟಿ ಸಹಯೋಗದೊಂದಿಗೆ ಸದರಿ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು

ಚರ್ಮರೋಗ ತಜ್ಞರಾದಂತಹ ಡಾ. ಅನುಷಾ ಇವರು ಉಪಸ್ಥಿತರಿದ್ದರು, ಸಂಸ್ಥೆಯ ಸಂಚಾಲಕರಾದಂತಹ ಕೆ ವೆಂಕಟೇಶ್ ಪ್ರಭು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು, ಪ್ರಾಂಶುಪಾಲರಾದ ಪ್ರಮೀಳಾ ಕೋಟ್ಯಾನ್ ಇವ ಸ್ವಾಗತಿಸಿದರು, ವಿದ್ಯಾರ್ಥಿಯಾದ ಕುಶಾಲ್ ಗೌಡ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾಥಿ ಬಿಷಪ್ರಸಾದ್ ಇವರು ಧನ್ಯವಾದವಿತ್ತರು. ನಂತರ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ, ಇಲ್ಲಿನ ತಜ್ಞ ವೈದ್ಯರ ತಂಡವು, ಕಣ್ಣು ಕಿವಿ ಮೂಗು ಹಲ್ಲು ಹಾಗೂ ಚರ್ಮಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮಕ್ಕ ತಪಾಸಣೆಯನ್ನು ನಡೆಸಿಕೊಟ್ಟರು.




















