ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು, ಇಲ್ಲಿ ಇಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಸಭಾ ಕಾರ್ಯಕ್ರಮದಲ್ಲಿ ದಾನಿ ದಾನಿಗಳಾದ ಕಮಲಾಕ್ಷ ಕಾಮತ್, ಅವರ ಸುಪುತ್ರರಾದ ಪ್ರತಿಕ್ ಕಾಮತ್, ಶ್ರೀ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ ಅವರು ಹಾಗೂ ಎಲ್ಲಾ ಶಿಕ್ಷಕ ಶಿಕ್ಷಕಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇವರೆಲ್ಲರನ್ನು ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ರೋಟರಿ ವತಿಯಿಂದ ಸನ್ಮಾನಿಸಲ್ಪಟ್ಟ ನಮ್ಮ ಶಾಲಾ ಶಿಕ್ಷಕಿ ರೂಮೈಸರನ್ನು ಹಾಗೂ ಶಾಲಾ ಹಿತೈಷಿ ಪ್ರತೀಕ್ ಕಾಮತ್ ರನ್ನು ಸನ್ಮಾನಿಸಲಾಯಿತು . ಅದೇ ರೀತಿ ವೃತ್ತ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿಜೇತರಾದ ಬಾಲಕ ಬಾಲಕಿಯರ ತಂಡ ಹಾಗೂ ತಾಲೂಕು ಮಟ್ಟದ ಖೋ ಖೋ ಪಂದ್ಯಾದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಬಾಲಕರ ತಂಡವನ್ನು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು. ಅದೇ ರೀತಿ ಕಮಲಾಕ್ಷ ಕಾಮತ್ ರವರು ಶಾಲಾ ಶಿಕ್ಷಕ ಶಿಕ್ಷಕಿಯರಿಗೆ ಉಡುಗೊರೆ ಹಾಗೂ ಧನಸಹಾಯ ನೀಡಿ ಶಿಕ್ಷಕ ದಿನದ ಶುಭಾಶಯವನ್ನು ಹಾರೈಸಿದರು. ಹಾಗೂ ಎಲ್ಲರಿಗೂ ಸ್ವೀಟ್ ಜೊತೆಗೆ ಪಾಯಸದ ಊಟ ವ್ಯವಸ್ಥೆಯನ್ನು ಮಾಡಿದರು. ವಿದ್ಯಾರ್ಥಿಗಳು ಅಧ್ಯಾಪಕರಿಗಾಗಿ ವಿವಿಧ ರೀತಿಯ ಗೇಮ್ಸ್ ಗಳನ್ನು ಆಯೋಜಿಸಿದ್ದು ಎಲ್ಲಾ ಶಿಕ್ಷಕರಿಗೂ ಬಹುಮಾನವನ್ನು ನೀಡಿದರು. ಹಾಗೂ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಉಮೇಶ್ ಸರ್ ಅವರು ಧನ್ಯವಾದಗಳು ನೀಡಿದರು ಗೀತಾ ಭಂಡಾರಿ ಯವರು ಕಾರ್ಯಕ್ರಮ ಸಂಯೋಜನೆ ಮಾಡಿದರು.














