28.4 C
Udupi
Monday, June 1, 2026
spot_img
spot_img
HomeBlogಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು,

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು,

2026 -27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿನ 2026-2 7ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ದಿನಾಂಕ 01-06-2 6ನೇ ಸೋಮವಾರದಂದು ಶಾಲಾ ಹಿತೈಷಿ ಹಾಗೂ ದಾನಿಗಳಾದ ಶ್ರೀಯುತ ಕಮಲಾಕ್ಷ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಅತಿಥಿಗಳು ಬಲೂನ್ಗಳನ್ನು ನೀಡಿ ಬ್ಯಾಂಡ್ ಸೆಟ್ ನೊಂದಿಗೆ ಸಮಾರಂಭಕ್ಕೆ ಬರ ಮಾಡಿಕೊಂಡರು ಮಕ್ಕಳು ಸಂತೋಷದಿಂದ ಕುಣಿದು ಕುಪ್ಪಳಿಸಿದರು. ವೇದಿಕೆಯಲ್ಲಿ ಶಾಲಾ ಸಂಚಲಕರಾದ ರಾಧಾಕೃಷ್ಣ ಶೆಟ್ಟಿ, ದುರ್ಗಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಡಂಬ, ದಾನಿಗಳಾದ ನಂದಕುಮಾರ್ ಮತ್ತು ಎಡ್ವಿನ್ ಡಿಸೋಜಾ ಹಾಗೂ ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಹೆಗಡೆಯವರು ಉಪಸ್ಥಿತರಿದ್ದರು. ಇವರೆಲ್ಲರನ್ನು ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗ್ಡೆಯವರು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಇಲಾಖೆವತಿಯಿಂದ ನೀಡಲಾದ ಪಠ್ಯಪುಸ್ತಕ ನಂದಕುಮಾರ್ ಶೆಟ್ಟಿ ಮುಂಬೈ ರವರು ನೀಡಲಾದ ನೋಟ್ ಪುಸ್ತಕ, ಎಡ್ವಿನ್ ಡಿಸೋಜಾ ನೀಡಲಾದ ಕೊಡೆ, ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘ ಇವರ ಬೆಳ್ಳಿ ಹಬ್ಬದ ಪ್ರಯುಕ್ತ ಸಂತೋಷ್ ರಾವ್ ಮತ್ತು ವೃಷಭ ರಾಜ್ ಕಡಂಬ ರವರು ಶಾಲಾ ಮಕ್ಕಳಿಗೆ ನೀಡಲಾದ ಬ್ಯಾಗುಗಳನ್ನು ಪ್ರಾಯೋಜಕರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಮುಖ್ಯ ಅತಿಥಿಗಳಾದ ಸಂತೋಷ ರಾವ್, ನಂದಕುಮಾರ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಮಲಾಕ್ಷ ಕಾಮತರಉಪಸ್ಥಿತಿಯಲ್ಲಿ ಶಾಲೆಗೆ ಕೊಡುಗೆಯನ್ನು ನೀಡಿದ ದಾನಿಗಳಿಗೆ ಸನ್ಮಾನಿಸಲಾಯಿತು. ಅಧ್ಯಕ್ಷರ ಭಾಷಣದ ನಂತರ ಶ್ರೀಮತಿ ವಿದ್ಯಾರವರು ವಂದಿಸಿದರು. ಸಹ ಶಿಕ್ಷಕರಾದ ಉಮೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಹಾಗು ಕಮಲಾಕ್ಷ ಕಾಮತಾರ ವತಿಯಿಂದ ಲಡ್ಡಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page