ಶಾಲಾ ಅಸೆಂಬ್ಲಿ ವೀಕ್ಷಿಸಿದ ಕಾರ್ಕಳ ರೊಟೇರಿಯನ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಕಸ್ತೂರಿ ಕಾರಂತ್ ಮತ್ತು ಅಶ್ವಿನ್

ಕಾರ್ಕಳ: ಶ್ರೀ ದುರ್ಗ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ ಕುಕ್ಕುಂದೂರು ಶಾಲಾ ಅಸೆಂಬ್ಲಿ ಗೆ ಕಾರ್ಕಳ ರೋಟಿರಿಯನ್ಸ್ ಹಾಗೂ ಸಾಮಾಜಿಕ ಕಾರ್ಯಕರ್ತೆಯಾದ ಕಸ್ತೂರಿ ಕಾರಂತ್ ಹಾಗೂ ಅವರ ಸಂಬಂಧಿ ಹಾಗೂ ಸಾಮಾಜಿಕ ಸೇವಾಕಾಂಕ್ಷಿ ಯಾದ ಶ್ರೀಯುತ ಅಶ್ವಿನ್ ರವರು ಆಗಮಿಸಿದರು.
ಅಸೆಂಬ್ಲಿಯನ್ನು ವೀಕ್ಷಿಸಿ,ಶಾಲೆಯಲ್ಲಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಗೀತಾ ಭಂಡಾರಿ ಅವರು ಅವರ ಕಿರುಪರಿಚಯವನ್ನು ಪ್ರಸ್ತುತಪಡಿಸಿದರು. ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಸ್ವಾಗತಿಸಿದರು. ಶಾಲವತಿಯಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಅಶ್ವಿನ್ ರವರು ಅವರ ಅಮ್ಮ ನೀಡಿದ ಸಹಾಯಧನವನ್ನು ಮುಖ್ಯ ಶಿಕ್ಷಕರಿಗೆ ನೀಡಿದರು. ಕಸ್ತೂರಿ ಕಾರಂತ್ ರವರ ವತಿಯಿಂದ ಮಕ್ಕಳಿಗಾಗಿ ಲಾಡು ವಿತರಿಸಲಾಯಿತು.





















