
ಬೆಂಗಳೂರು: ಇನ್ನು ಮುಂದೆ ವಾಹನಗಳ ಮೇಲೆ ವಿವಾದಾತ್ಮಕ, ಕ್ರೌರ್ಯ, ಅಶ್ಲೀಲ ಪೋಸ್ಟರ್ ಹಾಕಿದರೆ ದಂಡ ಬೀಳಲಿದ್ದು ಜೊತೆಗೆ ಸೀಜ್ ಮಾಡುವ ಸಾಧ್ಯತೆಯು ಇದೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ವಾಹನಗಳ ಮೇಲೆ ನೆಚ್ಚಿನ ನಟರ ಫೋಟೋ, ಯಾವುದೋ ವಿವಾದಾತ್ಮಕ ಫೋಟೋ ಅಥವಾ ಬರಹಗಳನ್ನು ಹಾಕಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಹದ್ದಿನ ಕಣ್ಣಿಟ್ಟಿದ್ದಾರೆ.
ಆಯಾ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳ ತಂಡ ಇಂತಹ ವಾಹನಗಳ ಪರಿಶೀಲನೆಗೆ ಇಳಿಯಲಿದ್ದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಕರು, ತಮ್ಮ ವಾಹನಗಳ ಮೇಲೆ ಯಾವುದಾದರೂ ಹಳೆಯ ಕೇಸುಗಳಿದ್ದರೆ ಅಂತ ವಾಹನಗಳನ್ನ ಅಧಿಕಾರಿಗಳು ಸೀಜ್ ಮಾಡಲಿದ್ದಾರೆ.
ಕೆಲವು ಕಂಪನಿ, ಸಂಸ್ಥೆಗಳ ಜಾಹೀರಾತುಗಳನ್ನು, ಪೋಸ್ಟರ್ ಕವರ್ ಹಾಕಿಕೊಳ್ಳಲು ನಗರ ಜಿಲ್ಲಾಧಿಕಾರಿಗಳು ಅನುಮತಿ ಕೊಟ್ಟಿದ್ದು, ಅದನ್ನ ಹೊರತುಪಡಿಸಿ ಇತರೆ ಪೋಸ್ಟರ್‌ಗಳನ್ನು ಹಾಕಿಕೊಂಡವರ ವಿರುದ್ಧ ದಂಡಾಸ್ತ್ರ ಪ್ರಯೋಗ ಮಾಡಲಿದ್ದಾರೆ.






























































































































