
ವರ್ಧಮಾನ ಪ್ರಾಥಮಿಕ ಶಾಲೆ ಸಾಣೂರು ಇಲ್ಲಿಯ ವಿದ್ಯಾರ್ಥಿಗಳು ಎ.ಎನ್.ಎಫ್ ಘಟಕದ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ಐಪಿಎಸ್ ಹಾಗೂ ಪೊಲೀಸ್ ಉಪಾಧೀಕ್ಷಕರಾದ ರಾಘವೇಂದ್ರ. ಆರ್. ನಾಯಕ್ ಹಾಗೂ ಎಲ್ಲಾ ಅಧಿಕಾರಿಗಳ ಸಹಕಾರದಿಂದ ನಕ್ಸಲ್ ನಿಗ್ರಹ ಪಡೆ ಕೇಂದ್ರಕ್ಕೆ ಭೇಟಿ ನೀಡಿ, ಭದ್ರತಾ ಪಡೆಗಳ ಕಾರ್ಯವೈಖರಿ ಕುರಿತು ಪ್ರತ್ಯಕ್ಷ ಅನುಭವ ಪಡೆದರು. ನಕ್ಸಲ್ ವಿರುದ್ಧದ ಕಾರ್ಯಾಚರಣೆ, ಭದ್ರತಾ ಸಿಬ್ಬಂದಿಯ ತಯಾರಿ, ಶಿಸ್ತು, ತಂತ್ರಜ್ಞಾನ ಬಳಕೆ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಎ ಎನ್ ಎಫ್ ಅಧಿಕಾರಿಗಳು ವಿವರಣೆಯನ್ನು ನೀಡುತ್ತಾ, ಭದ್ರತಾ ಪಡೆಗಳ ದೇಶ ಸೇವಾ ಧೋರಣೆ, ಅವುಗಳ ದಿನನಿತ್ಯದ ಚಟುವಟಿಕೆಗಳು ಮತ್ತು ಅಪರಾಧ ನಿಗ್ರಹ ವಿಧಾನಗಳ ಬಗ್ಗೆ ವಿವರಿಸಿದರು. ರಕ್ಷಣಾ ತಂತ್ರಗಳು, ಕಾರ್ಯಾಚರಣೆ ಮಾದರಿ ಹಾಗೂ ಶ್ವಾನಗಳ ಪ್ರಾತ್ಯಕ್ಷಿಕೆ ಮುಖಾಂತರ ಮಕ್ಕಳಿಗೆ ಮನವರಿಕೆ ಮಾಡಲಾಯಿತು,
ಮಕ್ಕಳಲ್ಲಿ ರಾಷ್ಟ್ರೀಯ ಭದ್ರತಾ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯ ಹಾಗೂ ಈ ಭೇಟಿಯಿಂದ ಭದ್ರತಾ ಪಡೆಗಳ ಮಹತ್ವವನ್ನು ಆಳವಾಗಿ ಗ್ರಹಿಸಿದ್ದು, ನಮ್ಮ ಮಕ್ಕಳು ಭವಿಷ್ಯದಲ್ಲಿ ದೇಶದ ಭದ್ರತೆಗಾಗಿ ತಮ್ಮ ಕರ್ತವ್ಯವನ್ನು ಅರಿಯುವ ಉತ್ತಮ ಅವಕಾಶ ಎಂದು ವರ್ಧಮಾನ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆ ಎ.ಎನ್.ಎಫ್ ಅಧಿಕಾರಿ ಗಳನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
