
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸರ್ಕಾರವು ರೈತರ ಕೃಷಿ ಉಪಕರಣಗಳಿಗೆ ಡಿಬಿಟಿ ಮೂಲಕ ಸಬ್ಸಿಡಿ ನೀಡಲು ಚಿಂತನೆ ನಡೆಸಿದ್ದು ಕೃಷಿಯನ್ನು ಇನ್ನಷ್ಟು ಸುಲಭಗೊಳಿಸಲು ಸರ್ಕಾರವು ರೈತರಿಗಾಗಿ ದೊಡ್ಡ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.
ರಸಗೊಬ್ಬರ ಸಬ್ಸಿಡಿಗೆ ಸರಕಾರ ನೀಡುವ ವೆಚ್ಚ 2 ಲಕ್ಷ ಕೋಟಿ ರೂ. ಇದರಿಂದ ರೈತರಿಗೆ 265 ರೂ.ಗೆ ಯೂರಿಯಾ ಚೀಲ ಸಿಗುತ್ತದೆ, ಆದರೆ ಸಬ್ಸಿಡಿ ನೇರವಾಗಿ ಕಂಪನಿಗೆ ಹೋಗುತ್ತದೆ. ಯಾವುದೇ ಮಧ್ಯವರ್ತಿ ಇಲ್ಲದೆ ನೇರವಾಗಿ ಸರ್ಕಾರದಿಂದ ರೈತರು ಸದುಪಯೋಗಪಡಿಸಿಕೊಳ್ಳುವಂತಹ ಯೋಜನೆ ಇದಾಗಿದ್ದು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಸಾರಿಗೆ ವೆಚ್ಚವನ್ನು ಭರಿಸಲು ಸಹ ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ವಿವರಿಸಿದ್ದಾರೆ.





















