32.6 C
Udupi
Friday, April 24, 2026
spot_img
spot_img
HomeBlogರಾಜಕೀಯ ಲಾಭಕ್ಕಾಗಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ

ರಾಜಕೀಯ ಲಾಭಕ್ಕಾಗಿ, ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ

ಪ್ರವಾಸೋದ್ಯಮಕ್ಕೆ ಕಾಂಗ್ರೆಸ್ ಅಡ್ಡಗಾಲು ಆರೋಪ, ಭ್ರಷ್ಟಾಚಾರ ಮರೆಮಾಚುವ ಪ್ರಯತ್ನ

ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ತೀವ್ರ ವಾಗ್ದಾಳಿ

ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಮುನಿಯಾಲು ಉದಯ ಶೆಟ್ಟಿ ತಿಳಿಸಿದ್ದಾರೆ.

ನ್ಯಾಯಪೀಠವು ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಅಲ್ಲದೆ ಪರಶುರಾಮ ಮೂರ್ತಿಯ ಮೇಲ್ಬಾಗ ನಕಲಿ ಎಂದು ಗೊತ್ತಿದ್ದರೂ ಮೇಲ್ಭಾಗವನ್ನು ಎಲ್ಲಿಯೂ ಜನರಿಗೆ ಕಾಣಿಸದೆ ರಾತ್ರಿ ಕದ್ದು ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ದು ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ. ಇಷ್ಟಿದ್ದರೂ ಕೂಡ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ. ಕೇವಲ ರಾಜಕೀಯ ಲಾಭಗೋಸ್ಕರ ಪರಶುರಾಮ ಥೀಮ್ ಪಾರ್ಕ್ ಬಳಸಿಕೊಂಡು ಜನರ ಭಾವನ ಜತೆ ಚೆಲ್ಲಾಟ ಕೂಡಲೇ ಸಮಾಜ ಬಹಿಷ್ಕರಿಸಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಉಡುಪಿ: ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಗ್ಯಾರಂಟಿ ಎಂದು ಹೇಳಿದ್ದಾರೆ.

ನ್ಯಾಯಪೀಠವು ಸಾರ್ವಜನಿಕರ ಹಣ ಲೂಟಿ ಮಾಡಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಅಲ್ಲದೆ ಪರಶುರಾಮ ಮೂರ್ತಿಯ ಮೇಲ್ಬಾಗ ನಕಲಿ ಎಂದು ಗೊತ್ತಿದ್ದರೂ ಮೇಲ್ಭಾಗವನ್ನು ಎಲ್ಲಿಯೂ ಜನರಿಗೆ ಕಾಣಿಸದೆ ರಾತ್ರಿ ಕದ್ದು ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ದು ಸರಿ ಎಂದು ಅಪಪ್ರಚಾರ ಮಾಡುತ್ತಿದ್ದ ಕಾರ್ಕಳ ಶಾಸಕರ ನಿಜ ಬಣ್ಣ ಬಯಲಾಗಿದೆ. ಇಷ್ಟಿದ್ದರೂ ಕೂಡ ಅಸಲಿ ಮೂರ್ತಿ ಎಂದು ಕೋರ್ಟಿಗೆ ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ನೋಡಿದರೆ ಅಚ್ಚರಿ ಎನಿಸುತ್ತಿದೆ. ಕೇವಲ ರಾಜಕೀಯ ಲಾಭಗೋಸ್ಕರ ಪರಶುರಾಮ ಥೀಮ್ ಪಾರ್ಕ್ ಬಳಸಿಕೊಂಡು ಜನರ ಭಾವನ ಜತೆ ಚೆಲ್ಲಾಟ ಕೂಡಲೇ ಸಮಾಜ ಬಹಿಷ್ಕರಿಸಬೇಕು ಮತ್ತು ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಪರಶುರಾಮ ಮೂರ್ತಿಯನ್ನು ತಯಾರು ಮಾಡಿದ ಕೃಷ್ಣ ನಾಯ್ಕ ಎಂಬವರಿಗೆ ಸರಿಯಾದ ಜ್ಞಾನ ಇಲ್ಲ. ಅವರು ಕೂಡ ದಿನಕೊಂದು ಕಥೆಗಳನ್ನ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಗುಣಮಟ್ಟದ ಪ್ರತಿಮೆ ನಿರ್ಮಾಣವಾಗಬೇಕಾದರೆ ಯಾವುದೇ ಕಾರಣಕ್ಕೂ ಮೂರ್ತಿಯ ಮರು ರಚನೆಗೆ ಕೃಷ್ಣನಾಯಕ್ ಅವರಿಗೆ ನೀಡದೆ ಬೇರೆ ಪರಿಣಿತ ತಂಡಕ್ಕೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ನಿರಂತರ ಸುಳ್ಳು ಹೇಳಿ ಜನರನ್ನ ಮರಳು ಮಾಡುವ ಶಾಸಕರಿದ್ದರೆ ಅದು ಕಾರ್ಕಳದಲ್ಲಿ ಮಾತ್ರ. ರಾಜ್ಯ ಹಾಗೂ ಕೇಂದ್ರದಲ್ಲಿ ಕೂಡ ಇಂತಹ ಶಾಸಕ ಸಿಗಲಿಕ್ಕಿಲ್ಲ. ಇವರಿಗೆ ಪ್ರಚಂಡ ಸುಳ್ಳುಗಾರ ಎಂದು ಬಿರುದು ನೀಡಿದರೂ ತಪ್ಪಾಗಲಾರದು. ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಚಾಳಿ ಇವರಿಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದು ಜನರನ್ನು ಮರಳು ಮಾಡುತ್ತಾ ತನ್ನ ಅಭಿವೃದ್ಧಿ ಮಾಡಿಕೊಂಡ ಕಾರ್ಕಳ ಶಾಸಕ ಈಗ ಪರಶುರಾಮ ತೀಮ್ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಎಂದು ಸುಳ್ಳು ಆರೋಪ ಮಾಡಿ ತನ್ನ ಭ್ರಷ್ಟಾಚಾರವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಕಾರ್ಕಳ ಮಸ್ತಕಾಭಿಷೇಕ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಪ್ರವಾಸೋದ್ಯಮಕ್ಕೆ ನೀಡಿ ಕಾರ್ಕಳ ಅಭಿವೃದ್ದಿ ಪಡಿಸಿದ್ದು ಕಾಂಗ್ರೆಸ್. ಆದರೆ ಕಾರ್ಕಳ ಶಾಸಕ ಎಣ್ಣೆ ಹೊಳೆ, ಕಾರ್ಕಳೋತ್ಸವ ಮೊದಲಾದ ಕಾರ್ಯಕ್ರಮವನ್ನು ಮಾಡಿ ಹಣ ಮಾಡಿದರೆ ವಿನಹ ಪ್ರವಾಸೋದ್ಯಮಕ್ಕೆ ಕೊಡುಗೆ ಏನು ಇಲ್ಲ ಎಂದು ಕಾರ್ಕಳ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page