
ಲಕ್ನೋ: ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರನ್ನು ಮಹಿಳೆಯರ ಮೇಲೆ ಎರಚಿ ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ವಿಧಾನಸಭೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ಮೂವರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. 16 ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ
ಮಳೆಯಿಂದಾಗಿ ಜಲಾವೃತಗೊಂಡಿದ್ದ ರಸ್ತೆಯ ಮೂಲಕ ವಾಹನಗಳು ಚಲಿಸುತ್ತಿದ್ದವು. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಗೆ ಯುವಕರ ಗುಂಪೊಂದು ನೀರು ಎರಚಿತ್ತು. ಪುರುಷ ಬೈಕ್ ಚಲಾಯಿಸುತ್ತಿದ್ದ. ಹಿಂದೆ ಮಹಿಳೆ ಕೂತಿದ್ದಳು. ಚಲಿಸುತ್ತಿದ್ದ ಬೈಕ್ ಹಿಡಿದುಕೊಂಡು ಯುವಕರು ಸುತ್ತುವರಿದು ನೀರು ಎರಚಿದ್ದಾರೆ. ಈ ವೇಳೆ ಬೈಕ್ ಜೊತೆಗೆ ಕೆಳಗೆ ಬೀಳುತ್ತಿದ್ದ ಮಹಿಳೆಯನ್ನು ಹಿಂದುಗಡೆಯಿಂದ ಯುವಕ ಹಿಡಿದು ಮೇಲೆತ್ತಿದ್ದಾನೆ.
ಮಹಿಳೆಯ ಮಾನಹಾನಿಗೆ ಯತ್ನಿಸಿದ ಆರೋಪ, ಗಲಭೆ ಮತ್ತಿತರ ಅಪರಾಧಗಳ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರವೀನಾ ತ್ಯಾಗಿ ತಿಳಿಸಿದ್ದಾರೆ











