33.2 C
Udupi
Thursday, April 23, 2026
spot_img
spot_img
HomeBlogಯುವಕ ಮಂಡಲ (ರಿ.)ಸಾಣೂರು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮ

ಯುವಕ ಮಂಡಲ (ರಿ.)ಸಾಣೂರು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮ

ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯುವಕ ಮಂಡಲ (ರಿ.) ಸಾಣೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಯುವಕ ಮಂಡಲದ ವತಿಯಿಂದ ಶಿವರಾಮ ರೈ ಕಲಾವೇದಿಕೆ ಸಾಣೂರು ಇಲ್ಲಿ ಜರಗಿತು. ಮುದ್ದುಕೃಷ್ಣ ಸ್ಪರ್ಧೆಯು 1ರಿಂದ 3 ವರ್ಷ ಮತ್ತು 3ರಿಂದ 6 ವರ್ಷದ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಕಾಶ್ ಪುತ್ರನ್ ನೆರವೇರಿಸಿ ಮುದ್ದುಮಕ್ಕಳಿಗೆ ಶುಭ ಹಾರೈಸಿದರು.

ಬಹುಮಾನ ವಿತರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಯಾನಂದ ಶೆಟ್ಟಿ ಮುದ್ದಣ್ಣ ಸಾಣೂರು ಇವರು ವಹಿಸಿ ಶ್ರೀ ಕೃಷ್ಣ ಲೀಲಾವಳಿಯೊಂದಿಗೆ ಮುಗ್ದ ಮನಸ್ಸಿನ ಮಕ್ಕಳಲ್ಲಿ ಒಳ್ಳೆಯ ಆಲೋಚನೆ ಮತ್ತು ಸಂದೇಶವನ್ನು ನೀಡಿದರೆ ಮುಂದಿನ ಅವರ ಜೀವನದಲ್ಲಿ ಪರಿಣಾಮ ಬೀಳಬಹುದು. “ಹಸಿ ಮಣ್ಣಿಗೆ ಕಲ್ಲನ್ನು ಬಿಸಾಡಿದರೆ ಹೇಗೆ ಅಂಟಿಕೊಳ್ಳುತ್ತಾದೋ ಹಾಗೆ ” ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಸ. ಹಿ. ಪ್ರಾ. ಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಶಿಕ್ಷಕರಾದ ಶ್ರೀಮತಿ ಕೆ. ಅರುಣಾ ಇವರು ಶ್ರೀ ಕೃಷ್ಣನು ವಿಷ್ಣುವಿನ 8 ನೇ ಅವತಾರ ಪಡೆದು ಅನೇಕ ಲೀಲೆಗಳೊಂದಿಗೆ ಜಗತ್ತನ್ನು ಉದ್ದಾರ ಮಾಡಿರುವ ಬಗ್ಗೆ, ಇದನ್ನು ಇಂದಿನ ಮಕ್ಕಳಲ್ಲಿ ತಿಳಿಸಿ ಹೇಳಿ ಜಾಗೃತಿ ಮೂಡಿಸಲು ಮಕ್ಕಳ ಪೋಷಕರು ಸಹಕರಿಸಿಬೇಕು ಎಂದು ಹೇಳಿದರು. ಕೆಪಿಎಂ ಸಾಣೂರು ಇದರ ಮಾಲಕರಾದ ಸುರೇಶ್ ಕಾಮತ್ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು. ವಿನುಷ ಶೆಟ್ಟಿ ನ್ಯಾಯವಾದಿಗಳು ಕಾರ್ಕಳ, ರತ್ನಕಾರ್ ಕಾಮತ್ ಮುರತಂಗಡಿ, ಬೇಬಿ ಕನ್ಸ್ಟ್ರಕ್ಷನ್ ಮಾಲೀಕರಾದ ಸಂತೋಷ್ ಸುವರ್ಣ L. P. S, ಕಿರಣ್ ಪರದೆ, ಮಂಡಲದ ಮಹಾ ಪೋಷಕರಾದ ಭಾಸ್ಕರ್ ಪೂಜಾರಿ, ಪ್ರಶಾಂತ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಮಹೇಶ್ ಕುಮಾರ್, ಜಗದೀಶ್ ಕುಮಾರ್, ಶಂಕರ್ ಶೆಟ್ಟಿ, ಪ್ರಸಾದ್ ಪೂಜಾರಿ, ಪ್ರಕಾಶ್ ಮಡಿವಾಳ, ರಾಘು ಪೂಜಾರಿ ಉಪಸ್ಥಿತರಿದ್ದರು.ಒಟ್ಟು 2 ವಿಭಾಗದಲ್ಲಿ 54 ಮಕ್ಕಳು ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1 ರಿಂದ 3 ವರ್ಷ ಒಳಗಿನ ಮಕ್ಕಳಲ್ಲಿ ಲಹರಿ ಪೂಜಾರಿ ಪ್ರಥಮ, ಚಾರಿತ್ರ್ಯ ದ್ವಿತೀಯ ಬಹುಮಾನ ಹಾಗೂ 3 ರಿಂದ 6 ವರ್ಷ ಒಳಗಿನ ಮಕ್ಕಳಲ್ಲಿ ಪ್ರಥಮ ಧ್ಯಾನ್ ರಾವ್ ಮತ್ತು ದ್ವಿತೀಯ ಜಾನವಿ ಜಯಂತ್ ಬಹುಮಾನ ಪಡೆದರು. ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸುದರ್ಶನ್ ನಾಯ್ಕ್ ಮತ್ತು ಮುರಳೀಧರ ಸುವರ್ಣ ಸ್ಪರ್ಧೆಗಳ ಬಹುಮಾನ ಪಟ್ಟಿ ವಾಚಿಸಿದರು. ಕಾರ್ಯಕ್ರಮದ ಲ್ಲಿ ಉಪಾಧ್ಯಕ್ಷರಾದ ಹರೀಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪೂಜಾರಿ, ಪದಾಧಿಕಾರಿಗಳಾದ ಚಂದ್ರಹಾಸ್ ಪೂಜಾರಿ, ವಿಘ್ನೇಶ್ ರಾವ್, ವಿದ್ಯಾನಂದ, ರೋಹಿತ್ ಆರ್. ಕೆ, ಜಯನ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್ ರಾವ್ ವಂದಿಸಿದರು. ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page