31.5 C
Udupi
Thursday, April 30, 2026
spot_img
spot_img
HomeBlogಮುದ್ರಾಡಿ ಬಲ್ಲಾಡಿ ತುಂಡುಗುಡ್ಡೆಯಲ್ಲಿ ಕ್ರೀಡಾಕೂಟ ಉದ್ಘಾಟನೆ

ಮುದ್ರಾಡಿ ಬಲ್ಲಾಡಿ ತುಂಡುಗುಡ್ಡೆಯಲ್ಲಿ ಕ್ರೀಡಾಕೂಟ ಉದ್ಘಾಟನೆ

ಮುದ್ರಾಡಿ ಬಲ್ಲಾಡಿ ತುಂಡುಗುಡ್ಡೆಯಲ್ಲಿ ಕ್ರೀಡಾಕೂಟ ಉದ್ಘಾಟನೆ
ಹೆಬ್ರಿ :ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ನೆರವು ಅತೀ ಅಗತ್ಯ. ಹಳೆವಿದ್ಯಾರ್ಥಿಗಳು ಶಾಲೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಸಹಾಯಹಸ್ತ ನೀಡುವ ಮೂಲಕ ನಮ್ಮ ಸಂಸ್ಥೆಯ ಬೆಳವಣಿಗೆಗೆ ಕಾರಣೀಭೂತವಾಗಿದ್ದಾರೆ ಎಂದು ತುಂಡುಗುಡ್ಡೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಕುಲಾಲ್ ಹೇಳಿದರು .


ಅವರು ಮುದ್ರಾಡಿ ಗ್ರಾಮದ ಬಲ್ಲಾಡಿ ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಮಧುಸೂದನ್ ಭಟ್,ಬೈದಶ್ರೀ ಕ್ರಿಕೆಟರ್ಸ್ ವರಂಗದ ಕಾರ್ಯದರ್ಶಿ ಶೋಧನ್ ಶೆಟ್ಟಿ ಭಾಗವಹಿಸಿ ಶುಭ ಹಾರೈಸಿ ಮಾತನಾಡಿದರು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಸೂರಜ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಮತಿ ಉಪಸ್ಥಿತರಿದ್ದರು . ಇದೇ ಸಂದರ್ಭದಲ್ಲಿ ಬೈದಶ್ರೀ ಕ್ರಿಕೆಟರ್ಸ್ ತಂಡದಿಂದ ಶಾಲಾ ಮಕ್ಕಳಿಗೆ ಒದಗಿಸಿದ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು ಶಾಲೆಯ ಮುಖ್ಯ ಶಿಕ್ಷಕಿ ಚಿತ್ರಾ ಸ್ವಾಗತಿಸಿದರು .ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಸಹಶಿಕ್ಷಕಿ ಪ್ರಮೀತಾ ವಂದಿಸಿದರು. ಶಿಕ್ಷಕಿ ಬಬಿತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page